Five Guarantees: ಸರ್ಕಾರದ ಗ್ಯಾರಂಟಿಗಳು ಜೂನ್ ಒಂದರಂದು ಜಾರಿಯಾಗುವ ಗ್ಯಾರಂಟಿ ಇಲ್ಲ, ಸಚಿವ ಜಾರ್ಜ್ ಮಾತುಗಳಲ್ಲಿ ಸ್ಪಷ್ಟತೆ ಕಾಣದು!
ಮುಖ್ಯಮಂತ್ರಿಗಳು ಎಲ್ಲ ಮಾಹಿತಿಯ ಪರಾಮರ್ಶೆ ನಡೆಸಿ ನಿರ್ಧಾರ ಪ್ರಕಟಿಸುವ ಮೊದಲು ಸಂಪುಟದ ಎಲ್ಲ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ ಎಂದು ಜಾರ್ಜ್ ಹೇಳಿದರು.
ಬೆಂಗಳೂರು: ರಾಜ್ಯದ ಜನ ಅಂದುಕೊಂಡಂತೆ ಕಾಂಗ್ರೆಸ್ ಸರ್ಕಾರ (Congress government) ನೀಡಿದ 5 ಗ್ಯಾರಂಟಿಗಳು ನಾಳೆಯಿಂದ ಅಂದರೆ ಜೂನ್ ಒಂದರಿಂದ ಜಾರಿಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಬೆಂಗಳೂರಲ್ಲಿ ಮಾತಾಡಿದ ಇಂಧನ ಸಚಿವ (energy minister) ಕೆಜೆ ಜಾರ್ಜ್ (KJ George), ಗ್ಯಾರಂಟಿಗಳ ಜಾರಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ, ಅಂಕಿ-ಅಂಶ ಸಂಗ್ರಹಿಸುವ ಕೆಲಸ ಪೂರ್ಣಗೊಂಡಿದೆ, ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಎಲ್ಲ ಮಾಹಿತಿಯ ಪರಾಮರ್ಶೆ ನಡೆಸಿ ನಿರ್ಧಾರ ಪ್ರಕಟಿಸುವ ಮೊದಲು ಸಂಪುಟದ ಎಲ್ಲ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ತವರಿನಲ್ಲಿ ಗೆದ್ದ ಆರ್ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ

ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ

‘ರಾಜ್ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
