ಕೆಎನ್ ರಾಜಣ್ಣಗೆ ಕೆಪಿಸಿಸಿ ಅಧ್ಯಕ್ಷನಾಗುವಾಸೆ, ಅದರೆ ಹೈಕಮಾಂಡ್ ಸಹ ಹಾಗೆ ಯೋಚಿಸುತ್ತದೆಯೇ?
ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಬೂತ್ ಮಟ್ಟದ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ತಾನು ಅನುಸರಿಸುವ ಪಾಲಿಸಿಯನ್ನು ಜಾರಿಗೆ ತರಬೇಕೆಂದು ರಾಜಣ್ಣ ಹೇಳುತ್ತಾರೆ. ಯಾವುದೇ ಕ್ಷೇತ್ರದ ಶಾಸಕನೊಬ್ಬನ ಜಾತಿಯವರನ್ನೇ ಬೂತ್ ಮಟ್ಟದ ಅಥವಾ ತಾಲೂಕುಮಟ್ಟದ ಅಧ್ಯಕ್ಷನಾಗಿ ಆರಿಸಬಾರದು ಎಂದು ಹೇಳುವ ಅವರು ತಮ್ಮ ಈ ಸಿದ್ಧಾಂತವನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗುವುದೆಂದು ಹೇಳಿದರು.
ಬೆಂಗಳೂರು: ಸಹಕಾರ ಸಚಿವ ಕೆಎನ್ ರಾಜಣ್ಣ ಕೆಪಿಸಿಸಿ ಅಧ್ಯಕ್ಷನಾಗುವ ಕನಸನ್ನು ಬಹಳ ದಿನಗಳಿಂದ ಹೊಸೆಯುತ್ತಿದ್ದಾರೆ. ಅದರೆ, ಹೈಕಮಾಂಡ್ ಇವರ ಬಗ್ಗೆ ಸಿರಿಯಸ್ಸಾಗಿಲ್ಲ ಅನ್ನೋದು ಬೇರೆ ವಿಚಾರ. ಹಾಗಾಗೇ ಮಾಧ್ಯಮಗಳ ಮುಂದೆ ಮನಸ್ಸಿಗೆ ಬಂದಿದ್ದನ್ನೆಲ್ಲ ಮಾತಾಡದಂತೆ ವರಿಷ್ಠರು ಎಚ್ಚರಿಸಿದ್ದಾರೆ. ಅದರ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಜಾಣ್ಮೆಯಿಂದ ಮಾತನ್ನು ಲೋಕಸಭಾ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಕಡೆ ತಿರುಗಿಸುತ್ತಾರೆ. ಬಜೆಟ್ಗೆ ಸಂಬಂಧಿಸಿದ ಮೀಟಿಂಗ್ ಸಿಎಂ ಸಿದ್ದರಾಮಯ್ಯ ಕರೆದಿರುವುದರಿಂದ ತಮ್ಮ ಇಲಾಖೆಯ ಎಸ್ಟಿಮೇಶನ್ ತಯಾರಿಸುವಲ್ಲಿ ಮಗ್ನನಾಗಿರುವುದಾಗಿಯೂ ಹೇಳುತ್ತಾರೆ. ಕೆಪಿಸಿಸಿ ಅಧ್ಯಕ್ಷನ ನೇಮಕಾತಿ, ಸಂಪುಟ ಪುನಾರಚನೆ ಮೊದಲಾದವೆಲ್ಲ ಹೈಕಮಾಂಡ್ ಅಣತಿ ಮೇರೆಗೆ ನಡೆಯುತ್ತವೆ ಎಂದು ಸಚಿವ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅವನೇನು ಸಮಾಜಕ್ಕೆ ರೋಲ್ ಮಾಡೆಲಾ? ದರ್ಶನ್ ವಿರುದ್ಧ ಸಚಿವ ಕೆಎನ್ ರಾಜಣ್ಣ ಗರಂ