Application submission: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅರ್ಹ ಮಹಿಳೆಯರು ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು? ಸಚಿವ ಕೃಷ್ಣ ಭೈರೇಗೌಡ ವಿವರಣೆ
ಈ ಯೋಜನೆಯಲ್ಲಿ ಹೆಚ್ಚೆಚ್ಚು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಲು ಅರ್ಹ ಮಹಿಳೆಯರು ಎಲ್ಲೆಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು ಅನ್ನೋದನ್ನು ಕಂದಾಯ ಸಚಿವ (revenue minister) ಕೃಷ್ಣ ಭೈರೇಗೌಡ (Krishna Byre Gowda) ವಿವರಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಇದ್ದೇಶಿಸಿ ಮಾತಾಡಿದ ಸಚಿವ, ಅರ್ಜಿಗಳನ್ನು ನಾಡ ಕಚೇರಿ, ಬಾಪೂಜೀ ಸೇವಾ ಕೇಂದ್ರ (Bapuji Seva Kendra), ಬೆಂಗಳೂರು ವನ್ ಕೇಂದ್ರ, ಡಿಜಿಟಲ್ ಸರ್ವಿಸ್ ಸೆಂಟರ್, ಸೇವಾ ಕೇಂದ್ರ ಮೊದಲಾದ ಕಡೆಗಳಲ್ಲಿ ಸಲ್ಲಿಸಬಹುದು ಎಂದು ಹೇಳಿದರು. ಅದಕ್ಕೂ ಮುಖ್ಯವಾಗಿ ಸರ್ಕಾರದ ಇ-ಗವರ್ನೆನ್ಸ್ ಇಲಾಖೆ ಒಂದು ಌಪ್ ಅನ್ನು ಕೆಲ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು ಅದರ ಮೂಲಕ ಮಹಿಳೆಯರು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಸಚಿವ ಹೇಳಿದರು. ಈ ಯೋಜನೆಯಲ್ಲಿ ಹೆಚ್ಚೆಚ್ಚು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ