ಕಾರವಾರದ ಶಿರೂರು ಬಳಿ ನಡೆದ ಗುಡ್ಡಕುಸಿತ ಮತ್ತು ಅನಾಹುತಗಳ ಮಾಹಿತಿ ನೀಡಿದ ಕೃಷ್ಣ ಭೈರೇಗೌಡ
ಗುಡ್ಡ ಕುಸಿತ ಪದೇಪದೆ ಉಂಟಾಗುತ್ತಿರುವುದರಿಂದ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ಪಡೆದುಕೊಂಡಿರುವ ಐಆರ್ ಬಿ ಕಂಪನಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪದೇಪದೆ ಸೂಚನೆ ನೀಡಿದರೂ ನಿರ್ಲಕ್ಷಿಸುತ್ತಿರುವುದರಿಂದ ಅವೆರಡರ ವಿರುದ್ಧ ಎಫ್ಐಅರ್ ದಾಖಲಿಸಿಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಬೆಂಗಳೂರು: ಕಾರವಾರದ ಶಿರೂರು ಬಳಿ ನಿನ್ನೆ ನಡೆದ ಗುಡ್ಡ ಕುಸಿತದ ದುರ್ಘಟನೆ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಮಗ್ರ ಮಾಹಿತಿಯನ್ನು ಇಂದು ನಗರದಲ್ಲಿ ಮಾಧ್ಯಮದರಿಗೆ ನೀಡಿದರು. ಒಂದೇ ಕುಟುಂಬದ ಐವರು ಮಣ್ಣಿನಡಿ ಸಿಲುಕಿರುವ ಅಥವಾ ಸಾವನ್ನಪ್ಪಿರುವ ಬಗ್ಗೆ ಅವರು ಶಂಕೆ ವ್ಯಕ್ತಪಡಿಸುತ್ತಾರೆ. ಮೂರು ಮೃತದೇಹಗಳು ಇದುವರೆಗೆ ಸಿಕ್ಕಿವೆ, ಎನ್ ಡಿಅರ್ ಎಫ್, ಎಸ್ ಡಿಆರ್ ಎಫ್, ಕಂದಾಯ ಇಲಾಖೆ ಮತ್ತು ಪೊಲೀಸ್ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿವೆ ಎಂದು ಸಚಿವ ಹೇಳುತ್ತಾರೆ. ಪತ್ತೆಯಾಗಿರುವ ಟ್ಯಾಂಕರ್ ಅಲ್ಲದೆ ಇನ್ನೊಂದು ಟ್ಯಾಂಕರ್ ಕೂಡ ಗಂಗಾವಳಿ ನದಿಯಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದೆ. ಅದರೆ ಹೆಚ್ ಪಿ ಸಿಎಲ್, ಬಿಪಿಸಿಎಲ್ ಅಥವಾ ಬೇರೆ ಯಾವುದೇ ಸಾರಿಗೆ ಕಂಪನಿ ಇದುವರೆಗೆ ದೂರು ಸಲ್ಲಿಸಿಲ್ಲ ಎಂದು ಭೈರೇಗೌಡ ಹೇಳಿದರು. ನೀರಲ್ಲಿ ಬಿದ್ದಿರುವ ಟ್ಯಾಂಕರ್ ನಿಂದ ಲೀಕ್ ಆಗುತ್ತಿದ್ದ ಗ್ಯಾಸ್ ಅನ್ನು ಕಂಪನಿಯವರು ನಿಲ್ಲಿಸಿದ್ದಾರೆ. ಗ್ಯಾಸ್ ನಿಂದ ಸುತ್ತಮುತ್ತಲಿನ ಜನಕ್ಕೆ ಅನಾಹುತ ಸಂಭವಿಸುವ ಸಾಧ್ಯತೆ ಇರೋದ್ರಿಂದ ಅದನ್ನು ಸುರಕ್ಷಿತವಾಗಿ ತೆರವು ಮಡುವ ಜವಾಬ್ದಾರಿಯನ್ನು ಗ್ಯಾಸ್ ಕಂಪನಿಗೆ ನಿಗದಿ ಮಾಡಲಾಗಿದೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬರ ಪರಿಹಾರ ನಿಧಿ ಬಿಡುಗಡೆ ವಿಳಂಬ; ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ ಸೂಚನೆ ಬಗ್ಗೆ ಕೃಷ್ಣ ಭೈರೇಗೌಡ ವಿವರಣೆ