ಒಂದು ಗಿಡಕ್ಕೆ 3,300 ರೂ., ಗುಂಡಿ ತೋಡಲು 300 ರೂ.!: ನೀವು ಹಣ ದುರ್ಬಳಕೆ ಮಾಡ್ತಿದ್ದೀರಾ? ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಭೈರೇಗೌಡ

Edited By:

Updated on: Jun 30, 2026 | 3:52 PM

ಮುಖ್ಯಾಂಶಗಳು

  • ಬಿಬಿಎಂಪಿ ಅಧಿಕಾರಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಅತಿಯಾದ ವೆಚ್ಚ ಮತ್ತು ಭ್ರಷ್ಟಾಚಾರ
  • ಬಿಬಿಎಂಪಿ ವತಿಯಿಂದ ಒಂದು ಗಿಡ ನೆಡಲು 3,300 ರೂ. ಖರ್ಚು ಮಾಡಲಾಗುತ್ತಿದೆ
  • ಗುಂಡಿ ತೋಡಲು 300 ರೂ. ಮೀಸಲಿಡಲಾಗಿದೆ

ಒಂದು ಗಿಡ ನೆಡಲು 3,300 ವೆಚ್ಚ ಎಂದು ಬಿಬಿಎಂಪಿ ಅಂದಾಜು ಮಾಡಿರುವುದನ್ನು ಸಚಿವ ಕೃಷ್ಣಭೈರೇಗೌಡರು ಪ್ರಶ್ನಿಸಿದ್ದಾರೆ. ಗುಂಡಿ ತೋಡಲು 300 ಮೀಸಲಿಟ್ಟರೂ, ಕ್ಷೇತ್ರದಲ್ಲಿ ಒಂದೂ ಗಿಡಕ್ಕೆ ಗುಂಡಿ ತೋಡಿಲ್ಲ ಎಂದು ಆರೋಪಿಸಿ, ಈ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ನೇರವಾಗಿ ಚಾಲೆಂಜ್ ಮಾಡಿದ್ದಾರೆ. ಮರಗಣತಿ ಹಾಗೂ ಗಿಡ ನೆಡುವಿಕೆಯ ನಡುವಿನ ಅಸಮರ್ಪಕ ಲೆಕ್ಕಾಚಾರಗಳ ಬಗ್ಗೆಯೂ ಸಚಿವರು ಸ್ಪಷ್ಟನೆ ಕೇಳಿದ್ದಾರೆ.

ಬೆಂಗಳೂರು, ಜೂ.30: ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡರು, ಬಿಬಿಎಂಪಿ ಅಧಿಕಾರಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಅತಿಯಾದ ವೆಚ್ಚ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಸಚಿವರು, ಬಿಬಿಎಂಪಿ ವತಿಯಿಂದ ಒಂದು ಗಿಡ ನೆಡಲು 3,300 ರೂ. ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದ್ದು, ಅದರಲ್ಲಿ ಗುಂಡಿ ತೋಡಲು 300 ರೂ. ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ತಮ್ಮ ಕ್ಷೇತ್ರದಲ್ಲಿ ನೆಡಲಾದ ಯಾವ ಗಿಡಕ್ಕೂ ಸರಿಯಾದ ಗುಂಡಿ ತೋಡಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ಫುಟ್‌ಪಾತ್ ಅಥವಾ ಮೀಡಿಯನ್‌ಗಳಲ್ಲಿ ಮೇಲ್ನೋಟಕ್ಕೆ ಗಿಡಗಳನ್ನು ಇರಿಸಲಾಗಿದೆಯೇ ಹೊರತು, ನಿಯಮದ ಪ್ರಕಾರ ಗುಂಡಿಗಳನ್ನು ತೋಡಿಲ್ಲ ಎಂದು ಆರೋಪಿಸಿದರು. ಗುಂಡಿ ತೋಡಲು ಮೀಸಲಿಟ್ಟ 300 ರೂ. ಹಣವನ್ನು ಅಧಿಕಾರಿಗಳು ನೇರವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 20 ವರ್ಷಗಳಲ್ಲಿ ಬಿಬಿಎಂಪಿ (ಹಿಂದಿನ ಬಿಎಂಪಿ ಸೇರಿದಂತೆ) ಎಷ್ಟು ಗಿಡಗಳನ್ನು ನೆಟ್ಟಿದೆ, ಮರಗಣತಿ (Tree Census) ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ನೆಟ್ಟ ಗಿಡಗಳು ಮರಗಣತಿಯಲ್ಲಿ ಪ್ರತಿಫಲಿಸುತ್ತಿವೆಯೇ ಎಂದು ಸಚಿವರು ಪ್ರಶ್ನಿಸಿದರು. ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾದರು. ಸಾರ್ವಜನಿಕ ಹಣದ ಪೋಲು ಮತ್ತು ನಿರ್ಲಕ್ಷ್ಯದ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More