Udupi: ಮೀನುಗಾರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಿಂದಿನ ಸರ್ಕಾರಗಳನ್ನು ದೂರದೆ ಪ್ರಬುದ್ಧತೆ ಪ್ರದರ್ಶಿಸಿದರು!

|

Updated on: Jul 08, 2023 | 6:09 PM

ತಾನು ಯಾರ ವಿರುದ್ಧವೂ ಆರೋಪ ಮಾಡೋದಿಲ್ಲ ಅಂತ ಖುದ್ದು ಅವರೇ ಹೇಳುತ್ತಾರೆ. ಇದು ನಿಶ್ಚಿತವಾಗಿಯೂ ರಾಜಕೀಯ ಪ್ರಬುದ್ಧತೆಯ ಪ್ರತೀಕ ಮಾರಾಯ್ರೇ.

ಉಡುಪಿ: ವಯಸ್ಸಿನಲ್ಲಿ ಬೇರ ಸಚಿವರಿಗಿಂತ ಚಿಕ್ಕವರು ಮತ್ತು ಮೊದಲ ಬಾರಿಗೆ ಸಚಿವರಾಗಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಮ್ಮ ಧೋರಣೆ ಹಾಗೂ ಕರ್ತವ್ಯ ಪ್ರಜ್ಞೆಯೆಡೆ ಅಭೂತಪೂರ್ವ ಪ್ರಬುದ್ಧತೆ (maturity) ಪ್ರದರ್ಶಿಸುತ್ತಿದ್ದಾರೆ. ಹೀಗೆ ಹೇಳಲು ಕಾರಣವಿದೆ. ಓಕೆ, ಸುರಿಯವ ಮಳೆಯಲ್ಲೂ ಅವರು ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕಷ್ಟದಲ್ಲಿರುವ ಮೀನುಗಾರ ಸಮುದಾಯದ (fishermen community) ಜನರಿಗೆ ಸಾಂತ್ವನ ಹೇಳುತ್ತಿರುವುದನ್ನು ಬೇರೊಂದು ವಿಡಿಯೋದಲ್ಲಿ ಚರ್ಚೆ ಮಾಡಿದ್ದೇವೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಅವರ ಪ್ರಬುದ್ಧತೆಯ ಪರಿಚಯವಾಗುತ್ತದೆ. ಕಡಲ ಕೊರೆತದ ಬಗ್ಗೆ ಮಾತಾಡುವ ಅವರು ಆ ಸಮಸ್ಯೆ ಪ್ರತಿವರ್ಷ ತಲೆದೋರುತ್ತಿದೆ ಎಂದು ಹೇಳುತ್ತಾರಾದರೂ, ಹಿಂದಿನ ಸರ್ಕಾರಗಳನ್ನು ದೂಷಿಸುವುದಿಲ್ಲ. ತಾನು ಯಾರ ವಿರುದ್ಧವೂ ಆರೋಪ ಮಾಡೋದಿಲ್ಲ ಅಂತ ಖುದ್ದು ಅವರೇ ಹೇಳುತ್ತಾರೆ. ಇದು ನಿಶ್ಚಿತವಾಗಿಯೂ ರಾಜಕೀಯ ಪ್ರಬುದ್ಧತೆಯ ಪ್ರತೀಕ ಮಾರಾಯ್ರೇ.

ಆಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಸತತವಾಗಿ ಸುರಿಯುತ್ತಿರುವ ಮಳೆ 7 ಜನರನ್ನು ಬಲಿತೆಗೆದುಕೊಂಡಿರುವ ವಿಚಾರಕ್ಕೆ ಬೇಸರ ಮತ್ತು ದುಃಖ ವ್ಯಕ್ತಪಡಿಸುತ್ತಾ 24 ಗಂಟೆಗಳೊಳಗೆ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದನ್ನು ಹೇಳುತ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ಬದ್ಧತೆ, ಸಂಕಲ್ಪ, ಕರ್ತವ್ಯದೆಡೆ ತೋರುತ್ತಿರುವ ಶ್ರದ್ಧೆ, ನಿಷ್ಠೆ ಹಾಗೂ ಜವಾಬ್ದಾರಿ ಆರಂಭಶೂರತ್ವ ಅನಿಸಿಕೊಳ್ಳಬಾರದು ಅದೇ ನಮ್ಮ ಆಶಯ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ