ಕನ್ನಡಿಗರ ಸ್ವಾಭಿಮಾನ ಹತ್ತಿಕ್ಕಲು ಶಿವಸೇನೆ ಮತ್ತು ಎಂಇಎಸ್ ಪುಂಡರಿಗೆ ಬಿಡೋದಿಲ್ಲ: ಪ್ರವೀಣ್ ಶೆಟ್ಟಿ, ಕರವೇ

|

Updated on: Feb 25, 2025 | 12:41 PM

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮರಾಠಿ ಭಾಷೆಯಲ್ಲಿ ಮಾತಾಡುವ ಮುಖಾಂತರ ಶಿವಸೇನೆ ಮತ್ತು ಮರಾಠಿ ಪುಂಡರ ಪರ ನಿಂತಿರುವುದನ್ನು ಸ್ಪಷ್ಟಪಡಿಸಿದ್ದಾರೆ, ಅವರು ರಾಜ್ಯದಲ್ಲಿ ಒಬ್ಬ ಮಂತ್ರಿ ಅನ್ನೋದನ್ನು ಮರೆತಂತಿದೆ, ಅವರಿಗೆ ಮರಾಠರ ಮೇಲೆ, ಭಾಷೆಯ ಮೇಲೆ ಪ್ರೀತಿಯಿದ್ದರೆ ಮಹಾರಾಷ್ಟ್ರಗೆ ಹೋಗಿ ನೆಲೆಸಲಿ, ಕನ್ನಡಿಗರ ಭಾವನೆನಗಳಿಗೆ ಧಕ್ಕೆಯುಂಟು ಮಾಡಿರುವ ಸಚಿವೆ ಕ್ಷಮೆ ಕೇಳಬೇಕು ಎಂದು ಪ್ರವೀಣ್ ಶೆಟ್ಟಿ ಹೇಳಿದರು.

ಬೆಳಗಾವಿ: ಜಿಲ್ಲೆಯ ಬಾಳೆಕುಂದ್ರಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣವೂ ಇಂದು ಪ್ರತಿಭಟನೆ ನಡೆಸಿತು. ಅಧ್ಯಕ್ಷ ಶೆಟ್ಟಿ ಮಾತಾಡಿ ಎಂಇಎಸ್ ಮತ್ತು ಶಿವಸೇನೆಯ ಗೂಂಡಾಗಳು ಹಲ್ಲೆ ನಡೆಸಿ ಪೋಕ್ಸೋ ಕೇಸ್ ಹಾಕಿದ್ದು ಕೇವಲ ಕಂಡಕ್ಟರ್ ಮೇಲೆ ಅಲ್ಲ, ಇಡೀ ಕರ್ನಾಟಕದ ಮೇಲೆ, ನಾವು ಕರ್ನಾಟಕದಲ್ಲಿದ್ದೀವೋ ಅಥವಾ ಬೇರೆ ರಾಜ್ಯದಲ್ಲಿದ್ದೀವೋ? ಮರಾಠೀ ಪುಂಡರು ಕನ್ನಡಿಗರ ಸ್ವಾಭಿಮಾನ ಹತ್ತಿಕ್ಕಲು ಬಿಡೋದಿಲ್ಲ, ಕಂಡಕ್ಟರ್ ವಿರುದ್ಧ ಹಾಕಿರುವ ಕೇಸನ್ನು ವಾಪಸ್ಸು ಪಡೆದಯಬೇಕು ಮತ್ತ್ತು ಅದನ್ನು ಹಾಕಿದ ಇನ್ಸ್​ಪೆಕ್ಟರ್​ನನ್ನು ಸಸ್ಪೆಂಡ್ ಮಾಡಬೇಕೆಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ನಡೆಸುವ ಸುದ್ದಿಗೋಷ್ಠಿಯಲ್ಲಿ ಹಾಜರಿರುವ ಮಹಿಳೆ ಕರವೇ ಪ್ರತಿಭಟನೆಯಲ್ಲೂ ಭಾಗಿ!