ಸ್ಪಂದನ ವಿಜಯ್​ಗೆ ಶ್ರದ್ಧಾಂಜಲಿ: ಅಂತಿಮ ನಮನ ಸಲ್ಲಿಸಿ ವಿಜಯರಾಘವೇಂದ್ರಗೆ ಸಾಂತ್ವನ ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ

ಸ್ಪಂದನ ವಿಜಯ್​ಗೆ ಶ್ರದ್ಧಾಂಜಲಿ: ಅಂತಿಮ ನಮನ ಸಲ್ಲಿಸಿ ವಿಜಯರಾಘವೇಂದ್ರಗೆ ಸಾಂತ್ವನ ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 09, 2023 | 11:01 AM

Minister Priyank Kharge pays tribute: ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸ ತೆರಳಿದ್ದ ಸ್ಪಂದನ ಸೋಮವಾರ ಬೆಳಗಿನ ಜಾವ ಬ್ಯಾಂಕಾಕ್ ನ ಹೋಟೆಲೊಂದರ ಕೋಣೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು.

ಬೆಂಗಳೂರು: ಸ್ಪಂದನ ವಿಜಯ ರಾಘವೇಂದ್ರಗೆ (Spandana Vijay Raghavendra) ಅಂತಿಮ ನಮನ ಸಲ್ಲಿಸಲು ಜನ ಬಿಕೆ ಶಿವರಾಂ (BK Shivaram) ಮನೆಗೆ ಆಗಮಿಸುತ್ತಿದ್ದಾರೆ. ಅಂತಿಮ ದರ್ಶನ ಪಡೆದವರಲ್ಲಿ ಗಣ್ಯರೂ ಸೇರಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಸ್ಪಂದನಾ ವಿಜಯರಾಘವೇಂದ್ರ ಪಾರ್ಥೀವ ಶರೀರವನ್ನು ಇಟ್ಟಿರುವ ಶವಪೆಟ್ಟಿಗೆ ಮೇಲೆ ಹೂಮಾಲೆ ಇರಿಸಿ ನಮಸ್ಕರಿಸಿದ ಬಳಿಕ ಖರ್ಗೆ ಶೋಕಸಾಗರದಲ್ಲಿ ಮುಳುಗಿ ದಿಕ್ಕೇ ತೋಚದಂಥ ಸ್ಥಿತಿಯಲ್ಲಿ ಪೆಟ್ಟಿಗೆ ಪಕ್ಕದಲ್ಲಿ ನಿಂತಿದ್ದ ವಿಜಯರಾಘವೇಂದ್ರ ಅವರನ್ನು ತಬ್ಬಿ ಸಾಂತ್ವನ ಹೇಳಿದರು. ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸ ತೆರಳಿದ್ದ ಸ್ಪಂದನ ಸೋಮವಾರ ಬೆಳಗಿನ ಜಾವ ಬ್ಯಾಂಕಾಕ್ ನ ಹೋಟೆಲೊಂದರ ಕೋಣೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು. ಅವರ ಪಾರ್ಥೀವ ಶರೀರವನ್ನು ಮಂಗಳವಾರ ತಡರಾತ್ರಿ ಬೆಂಗಳೂರಿಗೆ ತರಲಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ