ದೊಡ್ಡವರು, ಚಿಕ್ಕವರು ಯಾರೇ ಆದ್ರೂ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿ -ಆರ್.ಅಶೋಕ್ ಸೂಚನೆ
ತಮ್ಮ ಎಲ್ಲಾ ಡಿಸಿ, ತಹಶೀಲ್ದಾರ್ಗಳಿಗೆ ಸೂಚಿಸಲಾಗಿದೆ ಬಿಬಿಎಂಪಿ ಜೊತೆ ನಿಂತು ದಾಖಲೆಗಳನ್ನು ಕೊಟ್ಟು ಯಾವುದೇ ಮುಲಾಜಿಲ್ಲದೆ ದೊಡ್ಡವರು, ಚಿಕ್ಕವರೂ ಏನು ನೋಡದೆ. ಯಾರೇ ಒತ್ತುವರಿ ಮಾಡಿದ್ದರು ಅದನ್ನು ತೆರವು ಮಾಡಿ.
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಶುರುವಾಗಿದೆ. ಯಲಹಂಕ ನ್ಯೂಟೌನ್ ಎನ್ಸಿಬಿಎಸ್ನಲ್ಲಿ ಒತ್ತುವರಿ ಕಟ್ಟಡಗಳನ್ನು ಜೆಸಿಬಿ, ಟ್ರ್ಯಾಕ್ಟರ್ ಮೂಲಕ ಕೆಡವಲಾಗುತ್ತಿದೆ. ಸದ್ಯ ರಾಜಕಾಲುವೆ ಒತ್ತುವರಿ ಕುರಿತು ಸಚಿವ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ಸರ್ಕಾರಗಳು ಮಳೆ ಬಂದಾಗ ಡೆಮಾಲಿಷನ್ ನಾಟಕವಾಡಿ ಮಳೆ ನಿಂತ ಬಳಿಕ ನಿಲ್ಲಿಸುತ್ತಿದ್ದರು. ಆದರೆ ನಮ್ಮ ಸರ್ಕಾರ ಒತ್ತುವರಿ ತೆರವಿಗೆ ತಾರತಮ್ಯ ಮಾಡಲ್ಲ. ಯಾವುದೇ ಒತ್ತುವರಿ ಇದ್ದರೂ ತೆರವು ಮಾಡೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ನಿಲ್ಲಲ್ಲ, ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಾಖಲೆ ಇಲ್ಲದಿದ್ದರೆ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಿಎಂ ಜೊತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಕಂದಾಯ ಇಲಾಖೆ ಸರ್ವೆ ಮಾಡಿ ಬಿಬಿಎಂಪಿಗೆ ಪಟ್ಟಿ ನೀಡಿದೆ. ತಮ್ಮ ಎಲ್ಲಾ ಡಿಸಿ, ತಹಶೀಲ್ದಾರ್ಗಳಿಗೆ ಸೂಚಿಸಲಾಗಿದೆ ಬಿಬಿಎಂಪಿ ಜೊತೆ ನಿಂತು ದಾಖಲೆಗಳನ್ನು ಕೊಟ್ಟು ಯಾವುದೇ ಮುಲಾಜಿಲ್ಲದೆ ದೊಡ್ಡವರು, ಚಿಕ್ಕವರೂ ಏನು ನೋಡದೆ. ಯಾರೇ ಒತ್ತುವರಿ ಮಾಡಿದ್ದರು ಅದನ್ನು ತೆರವು ಮಾಡಿ ಎಂದು ಆಶೋಕ್ ಆದೇಶಿಸಿದ್ದಾರೆ. ಈ ನೆರೆ ನಮಗೆ ಪಾಠ ಕಲಿಸಿದೆ. ಯಾವುದಕ್ಕೂ ಬಗ್ಗದೆ ಒತ್ತುವರಿ ತೆರವು ಮಾಡುತ್ತೇವೆ. ಬಾಗಮನೆ ಪಾರ್ಕ್ ಗೆ ಯಾವುದೇ ವಿನಾಯಿತಿ ಕೊಟ್ಟಿಲ್ಲ. ದೊಡ್ಡವರು ಚಿಕ್ಕವರು ಅಂತ ನೋಡಲ್ಲ. ಕೋರ್ಟ್ ಕೆವಿಯಟ್ ಹಾಕುವ ಬಗ್ಗೆ ಚರ್ಚೆ ಮಾಡುತ್ತೇನೆ. ಸಿಎಂ ಮತ್ತು ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡುತ್ತೇನೆ ಎಂದರು.