ರೈತರ ಸಾಲಮನ್ನಾ ಮಾಡುವುದು ತಮ್ಮ ಸರ್ಕಾರಕ್ಕೆ ಸಾಧ್ಯವಾ ಅಥವಾ ಇಲ್ಲವಾ ಎಂದಷ್ಟೇ ಸಚಿವ ಲಾಡ್ ಹೇಳಬೇಕಿತ್ತು!
ರೈತ ಮುಖಂಡನಿಗೆ ನೇರ ಉತ್ತರ ಕೊಡುವ ಬದಲು ಸಚಿವ ಲಾಡ್ ಕೇಂದ್ರದಲ್ಲಿ ಮನಮೋಹನ ಸಿಂಗ್ ಸರ್ಕಾರ ರೈತರ 73,000 ಕೋಟಿ ರೂ. ಸಾಲ ಮನ್ನಾ ಮಾಡಿತ್ತು, ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದೆ, ಯಾವ ರಾಜ್ಯದಲ್ಲೂ ಸಾಲ ಮಾಡಿಲ್ಲ ಅಂತ ಮಾಧ್ಯಮದವರ ಮುಂದೆ ಹೇಳುವಂತೆ ರೈತ ಮುಖಂಡನಿಗೆ ಗದರುವ ಧ್ವನಿಯಲ್ಲಿ ಹೇಳಿದರು.
ಧಾರವಾಡ: ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಹುಲಿಕೇರಿ ಗ್ರಾಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ರೈತ ಮುಖಂಡರೊಬ್ಬರ ನಡುವೆ ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು. ರೈತ ಮುಖಂಡನ ವಾದ ಸರಳವಾಗಿತ್ತು ಅದರೆ ಸಚಿವ ಲಾಡ್ ಅದನ್ನು ಕ್ಲಿಷ್ಟಕರ ಮಾಡಿದರು. ತೆಲಂಗಾಣದಲ್ಲಿ ₹ 2 ಲಕ್ಷವರೆಗಿನ ರೈತರ ಸಾಲವನ್ನು ಮನ್ನಾ ಮಾಡೋದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮಹಾರಾಷ್ಟ್ರದಲ್ಲಿ ಮೂರು ಲಕ್ಷ ರೂ. ವರೆಗಿನ ಸಾಲವನ್ನು ಮನ್ನಾ ಮಾಡುವ ಆಶ್ವಾಸನೆಯನ್ನು ಕಾಂಗ್ರೆಸ್ ರೈತರಿಗೆ ನೀಡಿದೆ. ಕರ್ನಾಟಕದಲ್ಲೂ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿ ಅಂತ ರೈತ ಮುಖಂಡ ಹೇಳಿದ್ದಕ್ಕೆ ಲಾಡ್ ವಿತಂಡವಾದ ಶುರುಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: “ಮೋದಿಗೆ ಬೈಯಲು ಹೈಕಮಾಂಡ್ ಆರ್ಡರ್ ಆಗಿದೆ”: ಸಂತೋಷ್ ಲಾಡ್ ಹೇಳಿದ್ದಾಗಿ ಪ್ರಲ್ಹಾದ್ ಜೋಶಿ ಹೇಳಿಕೆ