ವಿಧಾನ ಮಂಡಲ ಕಾರ್ಯಕಲಾಪ: ಎರಡೂ ಕೈಗಳನ್ನು ಜೋಡಿಸಿ ಸಿದ್ದರಾಮಯ್ಯರನ್ನು ಬರಮಾಡಿಕೊಂಡರು ಸಚಿವ ಸುನಿಲ್ ಕುಮಾರ

Edited By:

Updated on: Sep 13, 2022 | 12:40 PM

ಸಿದ್ದರಾಮಯ್ಯರನ್ನು ಟೀಕಿಸುವ ಸಚಿವ ಸುನೀಲ್ ಕುಮಾರ್ ಇಂದು ವಿಧಾನ ಮಂಡಲದ ಕಾರ್ಯಕಲಾಪದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಆಗಮಸಿದಾಗ ಒಳಗೆ ಹೋಗುತ್ತಿದ್ದವರು ನಿಂತು ಅವರಿಗೆ ಎರಡೂ ಕೈಗಳನ್ನು ಮುಗಿಯುತ್ತಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರ (Siddaramaiah) ವರ್ಚಸ್ಸಿನ ಬಗ್ಗೆ ನಾವು ಆಗಾಗ್ಗೆ ಮಾತಾಡುತ್ತಿರುತ್ತೇವೆ. ಅವರ ಅನುಪಸ್ಥಿತಿಯಲ್ಲಿ ಕಟುವಾಗಿ ಟೀಕಿಸುವ ಬಿಜೆಪಿ ನಾಯಕರು ಅವರನ್ನು ಕಂಡಕೂಡಲೇ ಮೆತ್ತಗಾಗಿ ಬಿಡುತ್ತಾರೆ. ಸಿಟಿ ರವಿ (CT Ravi) ಅವರನ್ನೊಳಗೊಂಡ ಇಂಥದೊಂದು ಸನ್ನಿವೇಶವನ್ನು ನಾವು ಸೋಮವಾರ ತೋರಿಸಿದೆವು. ರವಿಯವರಂತೆಯೇ ಸಿದ್ದರಾಮಯ್ಯರನ್ನು ಟೀಕಿಸುವ ಸಚಿವ ಸುನೀಲ್ ಕುಮಾರ್ (Sunil Kumar) ಇಂದು (ಮಂಗಳವಾರ) ವಿಧಾನ ಮಂಡಲದ ಕಾರ್ಯಕಲಾಪದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಆಗಮಸಿದಾಗ ಒಳಗೆ ಹೋಗುತ್ತಿದ್ದವರು ನಿಂತು ಅವರಿಗೆ ಎರಡೂ ಕೈಗಳನ್ನು ಮುಗಿಯುತ್ತಾರೆ. ಸಿದ್ದರಾಮಯ್ಯ ಮುಗುಳ್ನಗುತ್ತಾ ಯೋಗಕ್ಷೇಮ ವಿಚಾರಿಸುತ್ತಾರೆ.