ಸಚಿವ ಉಮೇಶ ಕತ್ತಿ ವಿಧಿವಶ: ಹೈದರಾಬಾದ್ನಿಂದ ಅಗಮಿಸಬೇಕಿದ್ದ ವಿಶೇಷ ವಿಮಾನ ಪ್ರತಿಕೂಲ ಹವಾಮಾನದಿಂದ ವಿಳಂಬ
ಪ್ರತಿಕೂಲ ಹವಾಮಾನದ ಕಾರಣ ವಿಮಾನ ಆಗಮಿಸುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ. ಸಚಿವರ ದೇಹವಿನ್ನೂ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿದೆ.
ಬೆಂಗಳೂರು: ನಿನ್ನೆ ರಾತ್ರಿ ಹೃದಯಾಘಾತಕ್ಕೆ ಬಲಿಯಾದ ಸಚಿವ ಉಮೇಶ್ ಕತ್ತಿಯವರು (Umesh Katti) ಪಾರ್ಥೀವ ಶರೀರ ಇಂದು ಬೆಳಗ್ಗೆ 10 ಗಂಟೆಗೆ ಅವರ ಹುಟ್ಟೂರು ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಗೆ (Bellad Bagewadi) ರವಾನೆಯಾಗಬೇಕಿತ್ತಾದರೂ, ಹೈದರಾಬಾದ್ನಿಂದ ಬರಬೇಕಿದ್ದ ವಿಶೇಷ ವಿಮಾನ (special aircraft) ಬೆಂಗಳೂರು ತಲುಪುವುದು ತಡವಾಗಿದ್ದರಿಂದ ದೇಹವಿನ್ನೂ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿದೆ. ಪ್ರತಿಕೂಲ ಹವಾಮಾನದ ಕಾರಣ ವಿಮಾನ ಆಗಮಿಸುವುದು ವಿಳಂಬವಾಗುತ್ತಿದೆ ಎನ್ನಲಾಗಿದೆ.
Published on: Sep 07, 2022 10:56 AM