ವಸತಿ ಸಚಿವ ವಿ.ಸೋಮಣ್ಣ ನನ್ನ ಕಪಾಳಕ್ಕೆ ಹೊಡೆದಿಲ್ಲ ಎಂದ ಕೆಂಪಮ್ಮ
ವಸತಿ ಸಚಿವ ವಿ.ಸೋಮಣ್ಣ ನನ್ನ ಕಪಾಳಕ್ಕೆ ಹೊಡೆದಿಲ್ಲ ಸಮಾಧಾನದಿಂದಿರು ಅಂತಾ ಕಪಾಳದ ಮೇಲೆ ಕೈ ಇಟ್ಟರು ಎಂದ ಕೆಂಪಮ್ಮ
ಸಚಿವ ಸೋಮಣ್ಣರಿಂದ ಮಹಿಳೆ ಕೆಂಪಮ್ಮಗೆ ಕಪಾಳಮೋಕ್ಷ ಮಾಡಿದ ವಿಚಾರವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಟಿವಿ9ನೊಂದಿಗೆ ಕೆಂಪಮ್ಮ ಮಾತನಾಡಿ ವಸತಿ ಸಚಿವ ವಿ.ಸೋಮಣ್ಣ ನನ್ನ ಕಪಾಳಕ್ಕೆ ಹೊಡೆದಿಲ್ಲ. ಮನೆ ಇಲ್ಲ ಎಂದು ಸಚಿವರ ಕಾಲಿಗೆ ಬೀಳಲು ಹೋಗಿದ್ದೆ. ಈ ವೇಳೆ ಕಾಲಿಗೆ ಬೀಳಬೇಡ ಎಂದು ಕೈ ಮೇಲೆ ಎತ್ತಿದರು. ಸಮಾಧಾನದಿಂದಿರು ಅಂತಾ ಕಪಾಳದ ಮೇಲೆ ಕೈ ಇಟ್ಟರು. ಆದರೆ ಸಚಿವ ಸೋಮಣ್ಣ ಕಪಾಳಕ್ಕೆ ಹೊಡೆದಿಲ್ಲ. ವಿಡಿಯೋದಲ್ಲಿ ನನಗೆ ಹೊಡೆದಿರುವ ರೀತಿ ಇದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
Latest Videos