ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್

Edited By:

Updated on: May 25, 2025 | 6:05 PM

10ನೇ ತರಗತಿಯಲ್ಲಿ ಉತ್ತೀರ್ಣರಾದ ಆರು ವಿದ್ಯಾರ್ಥಿಗಳಿಗೆ ಮೊನ್ನೇ ಅಷ್ಟೇ ಸಚಿವ ಜಮೀರ್ ಅಹ್ಮದ್ ಖಾನ್ 3.5 ಲಕ್ಷ ಹಣ ಹಾಗೂ 6 ಸ್ಕೂಟಿಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮ ಅಪ್ಪಟ ಅಭಿಮಾನಿಯೊಬ್ಬರ ಕುಟುಂಬಕ್ಕೆ 5 ಲಕ್ಷ ರೂಪಾಯಿ ದನ ಸಹಾಯ ಮಾಡಿದ್ದಾರೆ. ಹಾವೇರಿಯ ಹಾನಗಲ್ ತಾಲೂಕಿನ ನಾಗರಹಳ್ಳಿ ಗ್ರಾಮದ ಮಹಮ್ಮದ್ ಜಾಫರ್ ಎನ್ನುವರು ಅಪ್ಪಟ ಜಮೀರ್ ಅಹ್ಮದ್ ಅವರ ಅಭಿಮಾನಿ ಆಗಿದ್ದರು.

ದಾವಣಗೆರೆ, (ಮೇ 25): 10ನೇ ತರಗತಿಯಲ್ಲಿ ಉತ್ತೀರ್ಣರಾದ ಆರು ವಿದ್ಯಾರ್ಥಿಗಳಿಗೆ ಮೊನ್ನೇ ಅಷ್ಟೇ ಸಚಿವ ಜಮೀರ್ ಅಹ್ಮದ್ ಖಾನ್ 3.5 ಲಕ್ಷ ಹಣ ಹಾಗೂ 6 ಸ್ಕೂಟಿಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮ ಅಪ್ಪಟ ಅಭಿಮಾನಿಯೊಬ್ಬರ ಕುಟುಂಬಕ್ಕೆ 5 ಲಕ್ಷ ರೂಪಾಯಿ ದನ ಸಹಾಯ ಮಾಡಿದ್ದಾರೆ. ಹಾವೇರಿಯ ಹಾನಗಲ್ ತಾಲೂಕಿನ ನಾಗರಹಳ್ಳಿ ಗ್ರಾಮದ ಮಹಮ್ಮದ್ ಜಾಫರ್ ಎನ್ನುವರು ಅಪ್ಪಟ ಜಮೀರ್ ಅಹ್ಮದ್ ಅವರ ಅಭಿಮಾನಿ ಆಗಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಅಪಘಾತದಲ್ಲಿ ಜಾಫರ್ ಸಾವನ್ನಪ್ಪಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಜಮೀರ್ ಅಹ್ಮದ್ ಅವರು ಬಹಳ ನೊಂದುಕೊಂಡಿದ್ದರು. ಅಲ್ಲದೇ ಅವರ ಕುಟುಂಬಕ್ಕೆ ಏನಾದರೂ ನೀಡಬೇಕು ಎಂದುಕೊಂಡಿದ್ದರು. ಅದರಂತೆ ಜಾಫರ್ ಕುಟುಂಬವನ್ನು ದಾವಣಗೆರೆಗೆ ಕರೆಸಿಕೊಂಡು ಹಣ ಸಹಾಯ ಮಾಡಿ ಕಳುಹಿಸಿದ್ದಾರೆ.

Published on: May 25, 2025 06:04 PM
Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More