ಸಿಎಂ ತವರು ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ದುರುಪಯೋಗ; 15ರೂ.ಗೆ ಅಕ್ಕಿ ಖರೀದಿಸಿ 60 ರೂ.ಗೆ ಮಾರಾಟ

| Updated By: ಆಯೇಷಾ ಬಾನು

Updated on: Nov 14, 2023 | 2:34 PM

ಮೈಸೂರಿನ ಎನ್​​ಆರ್ ಮೊಹಲ್ಲಾ ಸೇರಿ ಹಲವು ಕಡೆ ಅನ್ನಭಾಗ್ಯ ಅಕ್ಕಿ ದಂಧೆ ನಡೆಯುತ್ತಿದೆ. ಅಪ್ರಾಪ್ತರ ಮೂಲಕ ದಂಧೆಕೋರರು ಅಕ್ಕಿ ಖರೀದಿ ಮಾಡಿಸ್ತಿದ್ದಾರೆ. ಹಾಡಹಗಲೇ ಅಪ್ರಾಪ್ತರು ರಾಜಾರೋಷವಾಗಿ ಅಕ್ಕಿ ಖರೀದಿ ಮಾಡ್ತಿದ್ದಾರೆ. ಕೇವಲ 15 ರಿಂದ 16 ರೂಪಾಯಿಗೆ ಅನ್ನಭಾಗ್ಯ ಅಕ್ಕಿ ಖರೀದಿಸಿ, ಮಾರುಕಟ್ಟೆಯಲ್ಲಿ 50 ರಿಂದ 60 ರೂಪಾಯಿಗೆ ಮಾರುತ್ತಿದ್ದಾರೆ.

ಮೈಸೂರು, ನ.14: ಮೈಸೂರು ಸಿಎಂ ಸಿದ್ದರಾಮಯ್ಯ (Siddaramaiah) ತವರು ಜಿಲ್ಲೆ. ಆದರೆ ಇದೇ ಮೈಸೂರಿನಲ್ಲಿ ಅನ್ನಭಾಗ್ಯ (Anna Bhagya Scheme) ಅಕ್ಕಿ ದುರುಪಯೋಗ ಮಾಡಲಾಗಿದೆ. ಮನೆ ಮನೆಗೆ ತೆರಳಿ ಅನ್ನಭಾಗ್ಯ ಅಕ್ಕಿ ಖರೀದಿಸಿ ದಂಧೆಕೋರರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮೈಸೂರಿನ ಎನ್​​ಆರ್ ಮೊಹಲ್ಲಾ ಸೇರಿ ಹಲವು ಕಡೆ ಅನ್ನಭಾಗ್ಯ ಅಕ್ಕಿ ದಂಧೆ ನಡೆಯುತ್ತಿದೆ. ಅಪ್ರಾಪ್ತರ ಮೂಲಕ ದಂಧೆಕೋರರು ಅಕ್ಕಿ ಖರೀದಿ ಮಾಡಿಸ್ತಿದ್ದಾರೆ. ಹಾಡಹಗಲೇ ಅಪ್ರಾಪ್ತರು ರಾಜಾರೋಷವಾಗಿ ಅಕ್ಕಿ ಖರೀದಿ ಮಾಡ್ತಿದ್ದಾರೆ. ಕೇವಲ 15 ರಿಂದ 16 ರೂಪಾಯಿಗೆ ಅನ್ನಭಾಗ್ಯ ಅಕ್ಕಿ ಖರೀದಿಸಿ, ಮಾರುಕಟ್ಟೆಯಲ್ಲಿ 50 ರಿಂದ 60 ರೂಪಾಯಿಗೆ ಮಾರುತ್ತಿದ್ದಾರೆ. ಅಕ್ಕಿ ಖರೀದಿಗೆ ಬಂದ ವಾಹನ ಜಪ್ತಿ ಮಾಡಿದ್ರೂ ದಂಧೆ ನಿಲ್ಲುತ್ತಿಲ್ಲ. ಆಟೋ & ದ್ವಿಚಕ್ರ ವಾಹನಗಳಲ್ಲಿ ಮನೆ ಮನೆಗೆ ತೆರಳಿ ಮಕ್ಕಳು ಅಕ್ಕಿ ಖರೀದಿ ಮಾಡ್ತಿದ್ದಾರೆ. 2 ತಿಂಗಳ ಹಿಂದೆ ಆಟೋದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಣೆ ಮಾಡ್ತಿರುವ ವಿಡಿಯೋ ವೈರಲ್ ಆಗಿತ್ತು. ಮಕ್ಕಳು ಅನ್ನೋ ಕಾರಣಕ್ಕೆ ಅವರ ವಿರುದ್ಧ ಕೇಸ್ ದಾಖಲಾಗಿರಲಿಲ್ಲ. ಅಪ್ರಾಪ್ತರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ರೂ ಅನ್ನಭಾಗ್ಯ ದಂಧೆ ನಿಲ್ಲುತ್ತಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ