ಶಿವಾಜಿ ಮಹಾರಾಜ್ ಪ್ರತಿಮೆ ತೆರವು ವಿವಾದ: ಬಿಜೆಪಿ ಮತ್ತು ಹಿಂದೂ ಜಾಗರಣ ವೇದಿಕೆ ನೀಡಿರುವ ಬಾಗಲಕೋಟೆ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

|

Updated on: Aug 19, 2023 | 10:17 AM

ಜನ ಒಂದು ಸಾಮಾನ್ಯ ಶನಿವಾರದಂತೆ ರಸ್ತೆಗಲ್ಲಿ ಓಡಾಡುತ್ತಿರುವುದನ್ನು ನೋಡಬಹುದು. ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಸಹ ಬಾಗಲಕೋಟೆ ಬಸ್ ನಿಲ್ದಾಣದಿಂದ ಎಂದಿನಂತೆ ಓಡಾಡುತ್ತಿವೆ.

ಬಾಗಲಕೋಟೆ: ನಗರದ ಟ್ರಾಫಿಕ್ ಸರ್ಕಲ್​ ನಿಂದ (traffic circle) ಛತ್ರಪತಿ ಶಿವಾಜಿ ಮಹಾರಾಜ್ (Chhatrapati Shivaji Maharaj) ಪ್ರತಿಮೆ ತೆರವಿಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಬಂದ್ ಗೆ (Bagalkot Bandh) ಕರೆ ನೀಡಲಾಗಿದ್ದು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟಿವಿ9 ಕನ್ನಡ ವಾಹಿನಿಯ ಬಾಗಲಕೋಟೆ ವರದಿಗಾರ ಕಳಿಸಿರುವ ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ, ಕೆಲ ಅಂಗಡಿ ಮುಂಗಟ್ಟು, ಹೋಟೆಲ್ ಮತ್ತು ಬೇಕರಿಗಳು ಎಂದಿನಂತೆ ತೆರೆದುಕೊಂಡಿದ್ದು ತಮ್ಮ ವ್ಯಾಪಾರ ವಹಿವಾಟು ನಡೆಸಿವೆ. ಜನ ಒಂದು ಸಾಮಾನ್ಯ ಶನಿವಾರದಂತೆ ರಸ್ತೆಗಲ್ಲಿ ಓಡಾಡುತ್ತಿರುವುದನ್ನು ನೋಡಬಹುದು. ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಸಹ ಬಾಗಲಕೋಟೆ ಬಸ್ ನಿಲ್ದಾಣದಿಂದ ಎಂದಿನಂತೆ ಓಡಾಡುತ್ತಿವೆ. ಈಗಾಗಲೇ ವರದಿಯಾಗಿರುವಂತೆ ಬಿಜೆಪಿ ಹಾಗೂ ಹಿಂದೂ ಜಾಗರಣ ವೇದಿಕೆ ಬಾಗಲಕೋಟೆ ಬಂದ್​ ಆಚರಣೆಗೆ ಕರೆ ನೀಡಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ