Nirani Vs Yatnal: ನನ್ನ ತಂಟೆಗೆ ಬಂದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಪರೋಕ್ಷವಾಗಿ ಬಸನಗೌಡ ಯತ್ನಾಳ್ರನ್ನು ಎಚ್ಚರಿಸಿದ ಮುರುಗೇಶ್ ನಿರಾಣಿ
ನಿರಾಣಿ ಯತ್ನಾಳ್ಗೆ ಬಯ್ಯುವುದು ಯತ್ನಾಳ್ ನಿರಾಣಿಯನ್ನು ಹೀಯಾಳಿಸುವುದು ಬಹಳ ದಿನಗಳಿಂದ ಜಾರಿಯಲ್ಲಿದೆ.
ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಡುವಿನ ತಗಾದೆ-ತಂಟೆ ಎಲ್ಲ ಕನ್ನಡಿಗರಿಗೆ ಗೊತ್ತು. ಅವರು ಇವರಿಗೆ ಬಯ್ಯುವುದು ಇವರು ಅವರನ್ನು ಹೀಯಾಳಿಸುವುದು ಬಹಳ ದಿನಗಳಿಂದ ಜಾರಿಯಲ್ಲಿದೆ. ಇಂದು ಬಾಗಲಕೋಟೆ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ನಿರಾಣಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ನೇತೃತ್ವದಲ್ಲಿ ಭಾರತ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ, ಭಾರತ ಇಂದು ವಿಶ್ವದ 5 ನೇ ದೊಡ್ಡ ಎಕಾನಮಿ ಎನಿಸಿಕೊಂಡಿದೆ ಎಂದು ಹೇಳುತ್ತಲೇ ತಮ್ಮ ಬದ್ಧ ರಾಜಕೀಯ ವೈರಿ ಯತ್ನಾಳ್ ಗೆ ಒಂದು ಎಚ್ಚರಿಕೆಯನ್ನು ರವಾನಿಸಿದರು. ಯತ್ನಾಳ್ ಹೆಸರು ಉಲ್ಲೇಖಿಸದೆ ತಮ್ಮ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.