KDP Meeting; ರಾಮನಗರ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಉಪ ಮುಖ್ಯಮಂತ್ರಿಯಾಗಿ ಬಂದಿಲ್ಲ, ಕನಕಪುರ ಶಾಸಕನಾಗಿ ಬಂದಿದ್ದೇನೆ: ಡಿಕೆ ಶಿವಕುಮಾರ್

KDP Meeting; ರಾಮನಗರ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಉಪ ಮುಖ್ಯಮಂತ್ರಿಯಾಗಿ ಬಂದಿಲ್ಲ, ಕನಕಪುರ ಶಾಸಕನಾಗಿ ಬಂದಿದ್ದೇನೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 26, 2023 | 2:37 PM

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುವ ಟೀಕೆಗಳನ್ನು ಗಮನಕ್ಕೆ ತಂದರೂ ಶಿವಕುಮಾರ್ ಮೊದಲಿನ ಹಾಗೆ ಉಗ್ರವಾಗಿ ಟೀಕಿಸದೆ, ಸೌಮ್ಯವಾಗಿ ಉತ್ತರಿಸುತ್ತಾರೆ.

ರಾಮನಗರ: ಕನ್ನಡಿಗರೆಲ್ಲ ಇದನ್ನು ಗಮನಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರವಹಿಸಿಕೊಂಡಾಗಿನಿಂದ ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಗೋಜಿಗೆ ಹೋಗದೆ ಕೇವಲ ಕೆಲಸದ ಕಡೆ ಗಮನಹರಿಸುತ್ತಿದ್ದಾರೆ. ಪತ್ರಕರ್ತರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುವ ಟೀಕೆಗಳನ್ನು ಗಮನಕ್ಕೆ ತಂದರೂ ಶಿವಕುಮಾರ್ ಮೊದಲಿನ ಹಾಗೆ ಉಗ್ರವಾಗಿ ಟೀಕಿಸದೆ, ಸೌಮ್ಯವಾಗಿ ಉತ್ತರಿಸುತ್ತಾರೆ. ಇವತ್ತು ರಾಮಮಗರ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯೊಂದಿಗೆ (Ramalinga Reddy) ಆಗಮಿಸಿದ ಶಿವಕುಮಾರ್, ತಾನು ಜಿಲ್ಲೆಯ ಒಬ್ಬ ಶಾಸಕನಾಗಿ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆಯೇ ಹೊರತು ಉಪ ಮುಖ್ಯಮಂತ್ರಿಯಾಗಿ ಅಲ್ಲ, ರೆಡ್ಡಿಯವರೇ ಸಭೆ ನಡೆಸುತ್ತಾರೆ ಎಂದು ಹೇಳಿ ಹಿಂದಿನ ಉಸ್ತುವಾರಿ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರ ಹೆಸರೇಳದೆ ನಯವಾಗಿ ಟೀಕಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

.