‘ಹಾದಿ ಬಿಟ್ಟ ಸ್ವಾಮೀಜಿ’: ಶಾಸಕ ಯತ್ನಾಳ್ ಹೇಳಿದ್ದು ಯಾರಿಗೆ?
ದಾವಣಗೆರೆಯ ಬೇತೂರು ರಸ್ತೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಫ್ಲೆಕ್ಸ್ ವಿಚಾರವಾಗಿ ನಡೆದಿದ್ದ ಘರ್ಷಣೆ ಮತ್ತು ಮದ್ದೂರಿನಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣ ಸಂಬಂಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಶಾಂತಿ ಧೂತರೇ ಜಗತ್ತಿನಲ್ಲಿ ಬಾಂಬ್ ಹಾಕುವವರು ಎಂದು ಅವರು ಆರೋಪಿಸಿದ್ದಾರೆ.
ದಾವಣಗೆರೆ, ಸೆಪ್ಟೆಂಬರ್ 26: ಬೇತೂರು ರಸ್ತೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಫ್ಲೆಕ್ಸ್ ವಿಚಾರವಾಗಿ ನಡೆದಿದ್ದ ಘರ್ಷಣೆಯ ಬಗ್ಗೆ ಶಾಸಕ ಯತ್ನಾಳ್ (Basangouda Patil Yatnal) ವಾಗ್ದಾಳಿ ನಡೆಸಿದ್ದಾರೆ. ಮಸೀದಿ ಎದುರು ಫ್ಲೆಕ್ಸ್ ಬೋರ್ಡ್ ಹಾಕಿದ್ರೆ ಏನು ಸಮಸ್ಯೆ ಎಂದು ಪ್ರಶ್ನಿಸಿರುವ ಯತ್ನಾಳ್, ನಮ್ಮ ತಾಳ್ಮೆಯನ್ನ ನೀವು ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಒಬ್ಬ ಸ್ವಾಮೀಜಿ ಗೋಮಾತೆ ಸಗಣಿಯ ವಿಭೂತಿ ಬಗ್ಗೆ ಮಾತಾಡಿದ್ದರು. ಹಾಗಿದ್ರೆ ಹಂದಿ, ನಾಯಿಯದನ್ನು ಹಚ್ಚಿಕೊಂಡು ಅಡ್ಡಾಡು ಎಂದು ನಾನು ಹೇಳಿದ್ದೆ ಎಂದು ಯತ್ನಾಳ್ ನೆನಪಿಸಿಕೊಂಡಿದ್ದಾರೆ. ಶಾಂತಿ ಧೂತರೇ ಜಗತ್ತಿನಲ್ಲಿ ಬಾಂಬ್ ಹಾಕುವವರು. ಮದ್ದೂರಿನಲ್ಲಿ ಕಲ್ಲು ಎಸೆದವರು ಯಾರು ಎಂದೂ ಯತ್ನಾಳ್ ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
