ಸ್ವಪಕ್ಷದ ವಿರುದ್ಧವೇ ‘ಸಾಹುಕಾರ್’​ ಅಸಮಾಧಾನ: ರಮೇಶ್​​ ಜಾರಕಿಹೊಳಿ ಬೇಸರಕ್ಕೆ ಕಾರಣ ಏನು?

Updated By: ಪ್ರಸನ್ನ ಹೆಗಡೆ

Updated on: Nov 03, 2025 | 3:32 PM

ಸ್ವಪಕ್ಷ ಬಿಜೆಪಿ ವಿರುದ್ಧವೇ ಶಾಸಕ ರಮೆಶ್​ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಆಂತರಿಕ ಸಮಸ್ಯೆ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಡಿಸಿಎಂ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳಿ‌ ಅಥವಾ ಯಾರನ್ನಾದ್ರೂ ಸಿಎಂ ಮಾಡಲಿ. ಹೋರಾಟ ಮಾಡಲು ನಮಗೆ ಸಾಕಷ್ಟು ವಿಷಯಗಳಿವೆ. ನಾವು ವಿರೋಧ ಪಕ್ಷದ ಕೆಲಸವನ್ನ ಸರಿಯಾಗಿ ಮಾಡಬೇಕಿದೆ ಎಂದಿದ್ದಾರೆ.

ಬೆಳಗಾವಿ, ನವೆಂಬರ್​ 03: ಕಾಂಗ್ರೆಸ್​ ಆಂತರಿಕ ಸಮಸ್ಯೆ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಅಲ್ಲಿ ಯಾರು ಏಕನಾಥ ಸಿಂಧೆ, ಅಜಿತ್ ಪವಾರ್ ಆಗಲ್ಲ. ಬದಲಾಗಿ ಸರ್ಕಾರ ಇನ್ನೂ ಮುಂದುವರಿದ್ರೆ ನಮಗೆ ಅನುಕೂಲ ಆಗಲಿದೆ. ನಾವು ವಿರೋಧ ಪಕ್ಷದ ಕೆಲಸವನ್ನ ಸರಿಯಾಗಿ ಮಾಡಬೇಕಿದೆ ಎಂದು ಬೆಳಗಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಆಗುತ್ತಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಕ್ರಾಂತಿ ಆಗಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಡಿಸಿಎಂ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳಿ‌ ಅಥವಾ ಯಾರನ್ನಾದ್ರೂ ಸಿಎಂ ಮಾಡಲಿ. ಹೋರಾಟ ಮಾಡಲು ನಮಗೆ ಸಾಕಷ್ಟು ವಿಷಯಗಳಿವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.