ಹಾಸನ: ತಪ್ಪು ಮಾಹಿತಿ ಕೊಟ್ಟ PDO ವೇದಾವತಿ ಮೇಲೆ ಶಾಸಕ ಶಿವಲಿಂಗೇಗೌಡ ಕೆಂಡಾಮಂಡಲ
ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪಿಡಿಓ ವೇದಾವತಿ ಅವರ ವಿರುದ್ಧ ಸಾರ್ವಜನಿಕವಾಗಿ ಕೆಂಡಾಮಂಡಲರಾಗಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಕುರಿತು ಮಾಹಿತಿ ಇಲ್ಲದಿರುವುದು ಮತ್ತು ಫಲಾನುಭವಿಗಳ ಅರ್ಜಿ ಅಪ್‌ಲೋಡ್ ಮಾಡದಿರುವ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಸೀಕೆರೆಗೆ 1200 ಮನೆಗಳು ಬಂದಿದ್ದು, 300 ಮನೆಗಳ ಅನುದಾನ ಬಳಕೆಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಹಾಸನ, ನವೆಂಬರ್ 22: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪಿಡಿಓ ವೇದಾವತಿ ಅವರ ಕಾರ್ಯವೈಖರಿ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಕುರಿತ ಮಾಹಿತಿ ಕೊರತೆಗಾಗಿ ಸಾರ್ವಜನಿಕರ ಮುಂದೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪಿಡಿಓ ವೇದಾವತಿ ಅವರು PMAY ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಷ್ಟು ಅನುದಾನ ನೀಡುತ್ತವೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು , ನಿರ್ಗತಿಕ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರು ಮಾಡಲು ಆನ್‌ಲೈನ್‌ನಲ್ಲಿ ಅರ್ಜಿ ಅಪ್‌ಲೋಡ್ ಮಾಡುವಲ್ಲಿ ಆದ ವಿಳಂಬದ ಬಗ್ಗೆಯೂ ಪ್ರಶ್ನಿಸಿದ್ದಾರೆ.
ಸಾರ್ವಜನಿಕರಿಗಾಗಿ ಕೇಂದ್ರದಿಂದ 53 ಸಾವಿರ ರೂ. ಮತ್ತು ರಾಜ್ಯದಿಂದ 47 ಸಾವಿರ ರೂ. ಅನುದಾನ ಬರುತ್ತದೆ. ಅರಸೀಕೆರೆಗೆ 1200 ಮನೆಗಳು ಮಂಜೂರಾಗಿದ್ದು, ಅವುಗಳಲ್ಲಿ 300 ಮನೆಗಳ ಅನುದಾನ ಇನ್ನೂ ಖರ್ಚಾಗಿಲ್ಲ. ಪಿಡಿಓಗಳೇ ಆನ್‌ಲೈನ್‌ನಲ್ಲಿ ಅರ್ಜಿ ಅಪ್‌ಲೋಡ್ ಮಾಡಬೇಕಿದ್ದು, ಇದಕ್ಕಾಗಿ ಗ್ರಾಮಸಭೆ ಅಥವಾ ಇತರ ಶಿಫಾರಸುಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

