ಅನುದಾನ ನೀಡಬೇಕೆಂದು ಸಿದ್ದರಾಮಯ್ಯ ಮುಂದೆಯೇ ಬೀಗ ಬೈರತಿ ಸುರೇಶ್ ಕಾಲೆಳೆದ ವಿಶ್ವನಾಥ್!

ಅರುಣ್​ ಕುಮಾರ್​ ಬೆಳ್ಳಿ

Updated on: May 03, 2025 | 3:46 PM

ತಮ್ಮ ಭಾಷಣದಲ್ಲಿ ವಿಶ್ವನಾಥ್ ಅವರು ಮುಖ್ಯಮಂತ್ರಿಯವರನ್ನು ಹಾಡಿ ಹೊಗಳಿದರು. ಕೆಂಪೇಗೌಡನ ಊರು ಯಲಹಂಕದ ಇನ್ನಷ್ಟು ಅಭಿವೃದ್ಧಿಗೆ ಅನುದಾನ ಬೇಕಿದೆಯೆಂದು ಸಿಎಂ ಗಮನಕ್ಕೆ ತಂದಿದ್ದೇನೆ, ಬಜೆಟ್ ನಂತರ ಕೊಡುತ್ತೇನೆ ಅಂದವರು ಇನ್ನೂ ಕೊಟ್ಟಿಲ್ಲ, ಅದರೆ ಅಭಿವೃದ್ಧಿ ವಿಷಯದಲ್ಲಿ ಅವರು ತಾರತಮ್ಯ ಮಾಡಲ್ಲ ಎಂದ ಅವರು ಜಾಸ್ತಿ ಅನುದಾನ ಪಡೆದಿರುವ ಕೃಷ್ಣ ಭೈರೇಗೌಡರಿಂದ ಸಾಲ ಕೇಳಿದಾಗ ಜನ ಮತ್ತೊಮ್ಮೆ ನಕ್ಕರು.

ಬೆಂಗಳೂರು, ಮೇ 3: ಯಲಹಂಕ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ ಗಂಭೀರ ಮುಖಭಾವದವರಾದರೂ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿದ್ದಾರೆ. ಇವತ್ತು ಯಲಹಂಕದಲ್ಲಿ ನಡೆದ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತಾಡಿದ ಅವರು ತಮ್ಮ ಬೀಗ ಬೈರತಿ ಸುರೇಶ್ (Byrathi Suresh) ಅವರ ಕಾಲೆಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಣ್ಣ, ಸಿದ್ರಾಮಣ್ಣ ಎಂದು ಸಂಬೋಧಿಸುವ ಅವರು, ಸುರೇಶ್ ಯಲಹಂಕ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು ಕಡಿಮೆ ಮಾಡಿದ್ದಾರೆ, ಅಣ್ಣ ಸಿದ್ರಾಮಣ್ಣ ನೀವಾದರೂ ಕೊಂಚ ಹೇಳಿ, ಬೀಗರು ಅಂತ ಕೊಡೋದು ಬೇಡ, ಯಲಹಂಕದ ಅಭಿವೃದ್ಧಿಗೆ ಅವರು ಕೊಡಲಿ ಎಂದು ಹೇಳಿದಾಗ ಅಲ್ಲಿದ್ದವರೆಲ್ಲ ನಕ್ಕಿದ್ದೇ ನಕ್ಕಿದ್ದು.

ಇದನ್ನೂ ಓದಿ:  ಪಾಕಿಸ್ತಾನಕ್ಕೆ ಪಾಠ ಕಲಿಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗಳು ಅರ್ಥಹೀನ, ಅಪ್ರಸ್ತುತ: ಎಸ್​ಆರ್ ವಿಶ್ವನಾಥ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.