ಕೇವಲ 28 ದಿನದಲ್ಲಿ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ! ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ
ಹಬ್ಬ ಹಾಗೂ ಸಾಲುಸಾಲು ರಜೆ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಇದರ ಪರಿಣಾಮ ಹುಂಡಿಗಳೆಲ್ಲ ಭರ್ತಿಯಾಗಿದ್ದು, ಗುರುವಾರ ಎಣಿಕೆ ಮಾಡಲಾಯಿತು. ಇದೇ ವೇಳೆ, ಮಾದಪ್ಪ ಕೇವಲ 28 ದಿನಗಳಲ್ಲಿ ಮತ್ತೆ ಕೋಟ್ಯಧಿಪತಿಯಾಗಿರುವುದು ಗೊತ್ತಾಗಿದೆ.
ಚಾಮರಾಜನಗರ, ಅಕ್ಟೋಬರ್ 17: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೇಗುಲದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, 2.27 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿದೆ. ದಸರಾ, ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಾದಪ್ಪನ ಹುಂಡಿ ಭರ್ತಿಯಾಗಿದ್ದು, ಎಣಿಕೆ ನಡೆಸಲಾಯಿತು. ಕೇವಲ 28 ದಿನಕ್ಕೆ ಈ ಮೊತ್ತ ಸಂಗ್ರಹವಾಗಿದೆ. ಗುರುವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆಯಿತು. ನಗದು ಮಾತ್ರವಲ್ಲದೆ 46 ಗ್ರಾಂ ಚಿನ್ನ, 1.350 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಮಾದಪ್ಪನ ಹುಂಡಿಯಲ್ಲಿ 9 ವಿದೇಶಿ ನೋಟುಗಳು ಹಾಗೂ ಚಲಾವಣೆ ಇಲ್ಲದ ಎರಡು ಸಾವಿರ ಮುಖಬೆಲೆಯ 9 ನೋಟು ಸಿಕ್ಕಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Oct 17, 2025 07:47 AM