ಬಸ್​ಗಳಲ್ಲಿ ಮೊಬೈಲ್ ಕದೀತಿದ್ದ ಗ್ಯಾಂಗ್ ಐಡಿಯಾ ಕೇಳಿ ಪೊಲೀಸರಿಗೇ ಶಾಕ್

Updated on: Oct 29, 2025 | 2:17 PM

ಬೆಂಗಳೂರು ಪೊಲೀಸರಿಗೆ ಬಸ್‌ಗಳಲ್ಲಿ ಮೊಬೈಲ್ ಕದಿಯುತ್ತಿದ್ದ ಗ್ಯಾಂಗ್ ಪತ್ತೆಯಿಂದ ಶಾಕ್. CEIR ಪೋರ್ಟಲ್ ಮೂಲಕ 894 ಮೊಬೈಲ್ ಪತ್ತೆಹಚ್ಚಿ, 3.36 ಕೋಟಿ ರೂ. ಮೌಲ್ಯದ 1,949 ಮೊಬೈಲ್‌ಗಳು ವಶಕ್ಕೆ. 42 ಆರೋಪಿಗಳ ಬಂಧನ. ದಾಖಲೆ ಇಲ್ಲದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸದಂತೆ ಎಚ್ಚರಿಕೆ.

ಬೆಂಗಳೂರು,ಅಕ್ಟೋಬರ್ 29: ಬಸ್‌ಗಳಲ್ಲಿ ಮೊಬೈಲ್ ಕದಿಯುತ್ತಿದ್ದ ಗ್ಯಾಂಗ್‌ನ  ಪ್ಲಾನ್ ಪೊಲೀಸರಿಗೆ ಶಾಕ್ ನೀಡಿದೆ. ಕಮಾಂಡ್ ಸೆಂಟರ್ ಸಿಬ್ಬಂದಿಗಳು CEIR (Central Equipment Identity Register) ಪೋರ್ಟಲ್ ಮುಖಾಂತರ 894 ಕಳೆದು ಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಕಳೆದು ಹೋದ ಮೊಬೈಲ್‌ನ IMEI ನಂಬರ್‌ ಅಪ್‌ಲೋಡ್ ಮಾಡಿದ ನಂತರ ಯಾವುದೇ ಸಿಮ್ ಬಳಕೆ ಮಾಡಿದಾಗ ಪೊಲೀಸರಿಗೆ ಮಾಹಿತಿ ಬಂದಿದೆ. ಈ ರೀತಿಯಲ್ಲಿ 3.36 ಕೋಟಿ ರೂ. ಮೌಲ್ಯದ 1,949 ಮೊಬೈಲ್‌ಗಳು ವಶಕ್ಕೆ ಸಿಕ್ಕಿದ್ದು, 42 ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳರಿಂದ ಖರೀದಿಸಿದವರೇ ಹೆಚ್ಚು ಸಿಕ್ಕಿರುವುದರಿಂದ ದಾಖಲೆ ಇಲ್ಲದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಲು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.