Gift to PM Modi: ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ‘ಬೆಲ್ಲದ ಮೋದಿ ಕಲಾಕೃತಿ’ ಗಿಫ್ಟ್​, ಹೇಗಿದೆ ನೋಡಿ

|

Updated on: Apr 29, 2023 | 2:59 PM

ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲು ಬೆಲ್ಲದಲ್ಲಿ ಮೋದಿ ಕಲಾಕೃತಿ ಸಿದ್ಧಪಡಿಸಲಾಗಿದೆ.

ಬೆಳಗಾವಿ: ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಉಡುಗೊರೆಯಾಗಿ ನೀಡಲು ಬೆಲ್ಲದಲ್ಲಿ ಮೋದಿ ಕಲಾಕೃತಿ ಸಿದ್ಧಪಡಿಸಲಾಗಿದೆ. ಎಂಟು ಕೆ.ಜಿ ಸಾವಯವ ಬೆಲ್ಲದಲ್ಲಿ ಮೋದಿ ಪ್ರತಿರೂಪವನ್ನು ರಾಯಬಾಗದ ಕಲಾವಿದ ಬಾಬುರಾವ್ ನಿಡೋಣಿ ಅವರು ಕೆತ್ತನೆ ಮಾಡಿದ್ದು, ಕಲಾಕೃತಿ ಪೂರ್ಣಗೊಳಿಸಲು 7 ದಿನಗಳನ್ನು ತೆಗೆದುಕೊಂಡಿದ್ದಾರೆ. ಸದ್ಯ ಬೆಲ್ಲದ ಮೋದಿ ಕಲಾಕೃತಿಯನ್ನು ಕುಡಚಿ ಶಾಸಕ ಪಿ.ರಾಜೀವ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಲಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

 

 

Published on: Apr 29, 2023 02:57 PM