Karnataka Assembly Polls: ಕೂಡ್ಲಿಗಿಯ ಬಿಸಿಲಿಗೆ ತತ್ತರಿಸಿ ಕುಸಿದ ಸಿದ್ದರಾಮಯ್ಯಗೆ ಕ್ಷೇತ್ರದ ವೈದ್ಯ ಅಭ್ಯರ್ಥಿಯ ಮನೆಯಲ್ಲಿ ಉಪಚಾರ
ಕಾರಿನಲ್ಲಿ ಕೂರುವ ಪ್ರಯತ್ನದಲ್ಲಿದ್ದಾಗ ಸಿದ್ದರಾಮಯ್ಯ ಕುಸಿದು ಬಿಡುತ್ತಾರೆ. ಜತೆಗಿದ್ದ ಕಾರ್ಯಕರ್ತರು ಅವರು ಕೆಳಗೆ ಬೀಳದಂತೆ ಹಿಡಿಯುತ್ತಾರೆ.
ವಿಜಯನಗರ: ಜಿಲ್ಲೆಯ ಪ್ರಖರ ಬಿಸಿಲಿಂದ ಬಸವಳಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಕೂಡ್ಲಿಗಿಯಲ್ಲಿ ಕಾರು ಹತ್ತುವಾಗ ತಲೆಸುತ್ತಿ ಬಂದು ಕುಸಿದ ಪ್ರಸಂಗ ನಡೆಯಿತು. ಪಟ್ಟಣದಲ್ಲಿ ನಿರ್ಮಿಸಿದ ಹೆಲಿಪ್ಯಾಡ್ ನಲ್ಲಿ (helipad) ಚಾಪರ್ ನಿಂದ ಇಳಿದು ಕೊಂಚ ದೂರದಲ್ಲಿ ನಿಂತಿದ್ದ ಕಾರಿನ ಬಳಿ ಒಳಗೆ ಕೂರುವ ಮೊದಲು ಪುಟ್ ಸ್ಟ್ಯಾಂಡ್ ಮೇಲೆ ನಿಂತು ಸುತ್ತ ನೆರೆದಿದ್ದ ಜನರತ್ತ ಕೈ ಬೀಸುತ್ತಾರೆ. ಬಳಿಕ ಕಾರಿನಲ್ಲಿ ಕೂರುವ ಪ್ರಯತ್ನದಲ್ಲಿದ್ದಾಗ ಕುಸಿದು ಬಿಡುತ್ತಾರೆ. ಜತೆಗಿದ್ದ ಕಾರ್ಯಕರ್ತರು ಅವರು ಕೆಳಗೆ ಬೀಳದಂತೆ ಹಿಡಿಯುತ್ತಾರೆ. ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಎನ್ ಟಿ ಶ್ರೀನಿವಾಸ (Dr NT Srinivas) ಒಬ್ಬ ವೈದ್ಯರೂ ಅಗಿದ್ದು ಕೂಡಲೇ ಸಿದ್ದರಾಮಯ್ಯರನ್ನು ಮನೆಗೆ ಕರೆದೊಯ್ದು ಉಪಚರಿಸಿದ್ದಾರೆ. ಬಿಸಿಲಿನ ಝಳಕ್ಕೆ ವಿರೋಧ ಪಕ್ಷದ ನಾಯಕರಿಗೆ ಸನ್ ಸ್ಟ್ರೋಕ್ ಅಗಿರಬಹುದುದೆಂದು ಹೇಳಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ