ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ದೃಶ್ಯ ನೋಡಿದ್ರೆ ಹೃದಯ ಹಿಂಡಿ ಬರುತ್ತೆ

Edited By:

Updated on: Apr 17, 2025 | 9:51 PM

ನೀರು ಕುಡಿಯಲು ಹೋಗಿ ಬಿಂದಿಗೆಯಲ್ಲಿ ಸಿಲುಕಿದ ಕೋತಿ ಮರಿ ಸಾವನ್ನಪ್ಪಿರುವ ಘಟನ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ನಡೆದಿದೆ. ನೀರಿದ ದಾಹ ತೀರಿಸಿಕೊಳ್ಳಲು ಕೋತಿ ಮರಿಯೊಂದು ಬಿಂದಿಗೆಯಲ್ಲಿನ ನೀರು ಕುಡಿಯಲು ಮುಂದಾಗಿದೆ. ಆ ವೇಳೆ ಬಿಂದಿಗೆಯಲ್ಲಿ ಕೋತಿ ಮುಖ ಸಿಕ್ಕಿಕೊಂಡಿದೆ. ಆಗ ಉಸಿರಾಟವಾಡಲು ಸಾಧ್ಯವಾಗದೇ ಕೊನೆಯುಸಿರೆಳೆದಿದೆ.

ಕೊಪ್ಪಳ, (ಏಪ್ರಿಲ್ 17): ನೀರು ಕುಡಿಯಲು ಹೋಗಿ ಬಿಂದಿಗೆಯಲ್ಲಿ ಸಿಲುಕಿದ ಕೋತಿ ಮರಿ ಸಾವನ್ನಪ್ಪಿರುವ ಘಟನ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ನಡೆದಿದೆ. ನೀರಿದ ದಾಹ ತೀರಿಸಿಕೊಳ್ಳಲು ಕೋತಿ ಮರಿಯೊಂದು ಬಿಂದಿಗೆಯಲ್ಲಿನ ನೀರು ಕುಡಿಯಲು ಮುಂದಾಗಿದೆ. ಆ ವೇಳೆ ಬಿಂದಿಗೆಯಲ್ಲಿ ಕೋತಿ ಮುಖ ಸಿಕ್ಕಿಕೊಂಡಿದೆ. ಆಗ ಉಸಿರಾಟವಾಡಲು ಸಾಧ್ಯವಾಗದೇ ಕೊನೆಯುಸಿರೆಳೆದಿದೆ. ಇನ್ನು ಸತ್ತ ಮರಿಯನ್ನ ತಾಯಿ ಕೋತಿ ಹೊತ್ತು ತಿರುಗುತ್ತಿರುವ ದೃಶ್ಯ ನೋಡಿದ್ರೆ ಹೃದಯ ಹಿಂಡಿ ಬರುತ್ತೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊನೆಗೆ ಗ್ರಾಮಸ್ಥರು ಕೋತಿ ಮರಿಯ ಅಂತ್ಯಸಂಸ್ಕಾರ ನೆರವೇರಿಸಿದರು.

Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More