ಅಂಬಿಕಾಪತಿ ಮನೆಯಲ್ಲಿ ಬರಾಮತ್ತಾದ ಹಣ ಒಬ್ಬ ಪ್ರಮುಖ ಬಿಜೆಪಿ ಮುಖಂಡನಿಗೆ ಸೇರಿದ್ದು: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಅರುಣ್​ ಕುಮಾರ್​ ಬೆಳ್ಳಿ

Updated on: Oct 14, 2023 | 6:53 PM

ಅವರೇ ಹೇಳುವ ಹಿಟ್ ಅಂಡ್ ರನ್ ಕೆಟೆಗಿರಿಗೆ ಇದೂ ಸೇರುತ್ತೆ ತಾನೆ? ಬಿಜೆಪಿ ನಾಯಕರು ನೇರವಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತಿರಬೇಕಾದರೆ ಇವರಿಗ್ಯಾಕೆ ಹಿಂಜರಿಕೆ? ಹೇಗಿದ್ರೂ ಮಾಡ್ತಿರೋದು ಆರೋಪ ತಾನೇ? ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಮಾರಾಯ್ರೇ!

ಮೈಸೂರು: ಇಲ್ಲಿಯವರೆಗೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಬಿಬಿಎಂಪಿ ಗುತ್ತಿಗೆದಾರ ಅರ್ ಅಂಬಿಕಾಪತಿ (R Ambikapathy) ಮನೆಯಲ್ಲಿ ಸಿಕ್ಕ ಹಣ ಕಾಂಗ್ರೆಸ್ ಗೆ ಸೇರಿದ್ದು ಅಂತ ಆರೋಪ ಮಾಡುತ್ತಿದ್ದರು. ಈಗ ಕಾಂಗ್ರೆಸ್ ಅದೇ ಆರೋಪವನ್ನು ಬಿಜೆಪಿ ನಾಯಕರ ವಿರುದ್ಧ ಮಾಡುತ್ತಿದೆ. ಮೈಸೂರಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman) ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಣ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸೇರಿದ್ದು ಅಂತ ವೃಥಾ ಆರೋಪ ಮಾಡುತ್ತಿದ್ದಾರೆ ಆದರೆ ಅಸಲಿಗೆ ಆ ಹಣ ಒಬ್ಬ ಬಿಜೆಪಿ ಮುಖಂಡರಿಗೆ ಸೇರಿದ್ದು, ಅವರು ಹಿಂದಿನ ಬಿಜೆಪಿ ಸರ್ಕಾರದ್ಲಲಿ ಬಹಳ ಉನ್ನತ ಹುದ್ದೆಯಲ್ಲಿದ್ದರು, ಉಪಕರಣಗಳ ಮಾರಾಟ ಪ್ರಕರಣಲ್ಲಿದ್ದರು ಅಂತೆಲ್ಲ ಬೀಟಿಂಗ್ ಅರೌಂಡ್ ದಿ ಬುಶ್ ಮಾಡಿ ಅವರ ಹೆಸರನ್ನು ಎರಡು ದಿನಗಳ ಬಳಿಕ ಹೇಳುತ್ತೇನೆ ಅನ್ನುತ್ತಾರೆ. ಇದು ಲಕ್ಷ್ಮಣ್ ಮಹಾಶಯನ ಇಬ್ಬಂದಿತನವಲ್ಲದೆ ಮತ್ತೇನು? ಅವರೇ ಹೇಳುವ ಹಿಟ್ ಅಂಡ್ ರನ್ ಕೆಟೆಗಿರಿಗೆ ಇದೂ ಸೇರುತ್ತೆ ತಾನೆ? ಬಿಜೆಪಿ ನಾಯಕರು ನೇರವಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತಿರಬೇಕಾದರೆ ಇವರಿಗ್ಯಾಕೆ ಹಿಂಜರಿಕೆ? ಹೇಗಿದ್ರೂ ಮಾಡ್ತಿರೋದು ಆರೋಪ ತಾನೇ? ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.