ರೈತರಿಗೆ ಆಘಾತಕಾರಿ ಸುದ್ದಿ: ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲೂ ಮಳೆ ಬರೋದು ಡೌಟು ಎಂದರು ಕೃಷಿ ಸಚಿವ ಚಲುವರಾಯಸ್ವಾಮಿ
Met department: ಮಳೆ ಕೊರತೆ ಆಗ್ತಿದೆ. ಕೆಲವು ಕಡೆ ಬೆಳೆ ಒಣಗುತ್ತಿದೆ. ಇನ್ನೊಂದು ವಾರದ ಒಳಗೆ ಮಳೆ ಬಂದರೆ ಬೆಳೆ ಕೈಗೆ ಬರಬಹುದು. ಆದರೆ ಹವಾಮಾನ ಇಲಾಖೆ ಹೇಳುವ ಪ್ರಕಾರ ಮಳೆ ತೀರ ಕಡಿಮೆ ಇದೆ. ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲೂ ಮಳೆ ಬರೋದು ಡೌಟಂತೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 25: ಕರ್ನಾಟಕದ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ (Agriculture Minister N Cheluvarayaswamy) ಅವರಿಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈಗಾಗಲೇ ಬಿತ್ತನೆ ಕಾರ್ಯ 79 ಪರ್ಸೆಂಟ್ ಆಗಿದೆ. ಆ ಬೆಳೆ ರಕ್ಷಣೆ ಮಾಡಲು ಸಾಧ್ಯವಾಗ್ತಿಲ್ಲ. ಯಾಕಂದ್ರೆ ಮಳೆ ಕೊರತೆ ಆಗ್ತಿದೆ. ಕೆಲವು ಕಡೆ ಬೆಳೆ ಒಣಗುತ್ತಿದೆ. ಇನ್ನೊಂದು ವಾರದ ಒಳಗೆ ಮಳೆ ಬಂದರೆ ಬೆಳೆ ಕೈಗೆ ಬರಬಹುದು. ಆದರೆ ಹವಾಮಾನ ಇಲಾಖೆ (Met department) ಹೇಳುವ ಪ್ರಕಾರ ಮಳೆ ತೀರ ಕಡಿಮೆ ಇದೆ. ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲೂ ಮಳೆ ಬರೋದು (Monsoon 2023) ಡೌಟಂತೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಇಂದು ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಬೆಳೆ ವಿಮೆ ವಿಚಾರವಾಗಿ ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವರ ಕೆಲಸ ಮೆಚ್ಚಿ ಪ್ರಧಾನಿಯವರು ಒಂದು ಅಭಿನಂದನಾ ಪತ್ರ ಕಳಿಸಿದ್ದಾರೆ. ಬಾಗಲಕೋಟೆ, ಗದಗ್, ಬೆಳಗಾವಿ ತುಮಕೂರು ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ಕೊಡಿಸಲಾಗಿದೆ. ಹಾಕಿದ್ದ ಬೆಳೆ ತಕ್ಷವೇ ಒಣಗೋಗಿದೆ. ಅಂತಹ ರೈತರಿಗೆ ಬೆಳೆ ವಿಮೆ ಕೊಡಲಾಗಿದೆ. ಇನ್ನು ಬರ ಪರಿಹಾರ ವಿಚಾರವಾಗಿ ಸಬ್ ಕಮಿಟಿ ಮೀಟಿಂಗ್ ಮಾಡಲಾಗಿದೆ. ಬರ ಪರಿಹಾರಕ್ಕೆ ಕೇಂದ್ರದಲ್ಲಿ ಒಂದಿಷ್ಟು ರೂಲ್ಸ್ ಇವೆ. ತೀವ್ರ ಬರ ಪೀಡಿತ ತಾಲೂಕಿನಲ್ಲಿ ಗ್ರೌಂಡ್ ಟ್ರೂಥ್ ವೆರಿಫಿಕೇಷನ್ ಮಾಡಲಾಗುತ್ತದೆ. ಅವರು ಕೊಟ್ಟ ವರದಿ ಮೇಲೆ ಮತ್ತೊಂದು ಮೀಟಿಂಗ್ ಮಾಡುತ್ತೇವೆ. ಬರಗಾಲದ ಪರಿಸ್ಥಿತಿ ನಮಗೆ ಗೊತ್ತಿದೆ. ಹೀಗಾಗಿ ಒಂದು ಜಿಲ್ಲೆಗೆ ಒಬ್ಬರನ್ನು ನೋಡಲ್ ಅಧಿಕಾರಿ ನೆಮಕ ಮಾಡಲಾಗಿದೆ. ಅವರು ಜಿಲ್ಲಾ ಪ್ರವಾಸ ಕೈಗೊಂಡು ಪರಿಸ್ಥಿತಿ ಏನು ಅಂತ ಹೇಳ್ತಾರೆ. ನಾನು 29 ರಂದು ಚಿತ್ರದುರ್ಗಕ್ಕೆ ಹೋಗಿ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ತೀನಿ. ಮಂಡ್ಯದಲ್ಲಿ 28 ರಂದು ಸಿರಿಧಾನ್ಯ ಹಾಗೂ ಬೆಲ್ಲದ ಮೇಳ ಮಾಡಲಾಗುತ್ತಿದೆ. ನಿರ್ಮಲಾನಂದ ಸ್ವಾಮೀಜಿ ಉದ್ಘಾಟನೆ ಮಾಡುತ್ತಾರೆ. ರೈತರ ಜೊತೆಗೆ ಸಂವಾದ ಕೂಡ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ