ಮುಂಗಾರು ಮಳೆ ವಿಳಂಬ: ಮಳೆಗಾಗಿ ಶಾಸ್ತ್ರೋಕ್ತವಾಗಿ ಗೊಂಬೆ ವಿವಾಹ ಮಾಡಿದ ಜನ

|

Updated on: Jun 13, 2023 | 9:57 PM

ಮುಂಗಾರು ಮಳೆ ವಿಳಂಬ ಹಿನ್ನೆಲೆ ಮಳೆಗಾಗಿ ಗೊಂಬೆ ಮದುವೆ ಮಾಡಲಾಗಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಈ ವಿಶಿಷ್ಟ ಮದುವೆ ಕಂಡುಬಂದಿದೆ.

ಧಾರವಾಡ: ಕರಾವಳಿ ಜಿಲ್ಲೆಗಳಲ್ಲಿ ಮಳೆ (rains) ಅಬ್ಬರ ಜೋರಾಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ ಮಳೆ ಇಲ್ಲ. ಮುಂಗಾರು ಮಳೆ ಪ್ರಾರಂಭದಲ್ಲಿ ಕೈಕೊಟ್ಟಿದ್ದು, ರೈತರು ದೇವರ ಮೊರೆ ಹೋಗಿದ್ದಾರೆ. ಮುಂಗಾರು ಮಳೆ ವಿಳಂಬ ಹಿನ್ನೆಲೆ ಮಳೆಗಾಗಿ ಗೊಂಬೆ ಮದುವೆ ಮಾಡಲಾಗಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಈ ವಿಶಿಷ್ಟ ಮದುವೆ ಕಂಡುಬಂದಿದೆ. ಸವದತ್ತಿ ಯಲ್ಲಮ್ಮನ ಸನ್ನಿಧಿ ನೀರು ತಂದು ಪೂಜೆ ಮಾಡಿ, ಬಳಿಕ ಗ್ರಾಮದ ದೇವಸ್ಥಾನಗಳಿಗೆ ಪವಿತ್ರ ನೀರು ಸಿಂಪಡಣೆ ಮಾಡಿದ್ದಾರೆ. ಮದುವೆಯ ಎಲ್ಲ ಸಂಪ್ರದಾಯಗಳೊಂದಿಗೆ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಗೊಂಬೆಗಳ ವಿವಾಹ ಮಾಡಿದ್ದಾರೆ,

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on