Mandya News: ಮಳೆಗಾಗಿ ಕೆಆರ್ಎಸ್ ಡ್ಯಾಂ ಮುಂಭಾಗ ವಿಶೇಷ ಪೂಜೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ ಭಾಗಿ
ಮಳೆಗಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಮುಂಭಾಗ ಡಾ.ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಮಂಡ್ಯ: ರಾಜ್ಯದಲ್ಲಿ ಮಳೆಯಾಗದೆ ನದಿಗಳು ಬರಿದಾಗುತ್ತಿವೆ. ಈ ಹಿನ್ನೆಲೆ ಜನರು ದೇವರ ಹೆಸರಲ್ಲಿ ವಿವಿಧ ಪೂಜೆ ಮತ್ತು ವಿಶಿಷ್ಟವಾದ ಹರಕೆಗಳನ್ನು ನೆರವೇರುಸುತ್ತಿದ್ದಾರೆ. ಅದರಂತೆ ಕೆಆರ್ಎಸ್ ಡ್ಯಾಂ (KRS Dam) ಬರಿದಾಗುತ್ತಿರುವ ಹಿನ್ನೆಲೆ ಮಳೆಗಾಗಿ (Rain) ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್ಎಸ್ ಡ್ಯಾಂ ಮುಂಭಾಗ ಡಾ.ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಪೂಜೆಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಭಾಗಿಯಾಗಿದರು. ಗಣಪತಿ ಹೋಮ, ಪರ್ಜನ್ಯ ಜಪ, ಹೋಮ ನಡೆದಿದೆ.
Follow Us
Latest Videos

