ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಹೆಚ್ಚು ಹಿಂದೂ ಯುವಕರ ಹತ್ಯೆ ನಡೆದವು: ನಳಿನ್ ಕುಮಾರ್ ಕಟೀಲ್
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, 24 ಹಿಂದೂ ಯುವಕರ ಕೊಲೆಗಳಾಗಿದ್ದವು ಎಂದು ಹೇಳಿದ ಅವರು ಅವರ ಅವಧಿಯಲ್ಲೇ ಜೈಲಿನಲ್ಲಿರಬೇಕಿದ್ದ 2,000 ಜನ ಹೊರಬಂದರು ಎಂದರು.
ಕಾರವಾರ: ನಗರದಲ್ಲಿಂದು ಮಾಧ್ಯಮದವರೊಡನೆ ಮಾತಾಡಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲೇ ರಾಜ್ಯದಲ್ಲಿ ಕೋಮುಗಲಭೆಗಳು (communal riots) ಜಾಸ್ತಿಯಾಗಿವೆ ಎಂದು ಹೇಳಿದರು. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಅನ್ನುವ ಹಾಗೆ ಕಾಂಗ್ರೆಸ್ ಪಕ್ಷದ ತುಷ್ಟೀಕರಣದ ಧೋರಣೆ ಮತೀಯ ಗಲಭೆಗಳಿಗೆ ಪ್ರಚೋದನೆ ನೀಡುತಿತ್ತು ಎಂದು ಕಟೀಲ್ ಹೇಳಿದರು. ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿಯಾಗಿದ್ದಾಗ, 24 ಹಿಂದೂ ಯುವಕರ ಕೊಲೆಗಳಾಗಿದ್ದವು ಎಂದು ಹೇಳಿದ ಅವರು ಅವರ ಅವಧಿಯಲ್ಲೇ ಜೈಲಿನಲ್ಲಿರಬೇಕಿದ್ದ 2,000 ಜನ ಹೊರಬಂದರು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 07, 2023 06:48 PM