
[lazy-load-videos-and-sticky-control id=”Y-eAsasVkhY”]ಬೆಂಗಳೂರು: ಕೊರೊನಾ ಭೀತಿಯಿಂದ ಸಲೂನ್ ಮಾಲೀಕರು 15 ದಿನ ಸ್ವಯಂ ಪ್ರೇರಿತ ನಿರ್ಬಂಧ ಹೇರಿಕೊಂಡಿದ್ದಾರೆ. ಸೋಂಕಿನಿಂದ ದೂರ ಉಳಿಯಲು, ಕೊರೊನಾ ವಿರುದ್ಧ ಹೋರಾಡಲು ದಿಟ್ಟ ನಿರ್ಧಾರ ಹಾಕಿಕೊಂಡಿದ್ದಾರೆ.
ಕ್ಷೌರಿಕರ ಪರಿಹಾರ ಘೋಷಣೆ ತಡ
ಇನ್ನು ಹಾಸನದಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕ್ಷೌರಿಕರಿಗೆ ಪರಿಹಾರ ಘೋಷಣೆ ಮಾಡಿ ಕೊಡೋದು ತಡವಾಗಿದೆ ಎಂದರು. ಕ್ಷೌರಿಕರ ಸೂಕ್ತ ಮಾಹಿತಿ ಕಲೆ ಹಾಕಲು ಸಮಯ ಹಿಡಿದಿದೆ ಹೀಗಾಗಿ ತಡವಾಗಿದೆ. 16 ಲಕ್ಷ ಕಟ್ಟಡ ಕಾರ್ಮಿಕರಿಗೆ ಈಗಾಗಲೆ ಪರಿಹಾರ ಕೊಡಲಾಗಿದೆ. 1577 ಜನ ಕ್ಷೌರಿಕರು 2630 ಅಗಸರು ಹಾಸನ ಜಿಲ್ಲೆಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದಾರೆ. ಹಾಗೂ 2.40 ಲಕ್ಷ ಕ್ಷೌರಿಕರು 70 ಅಗಸರು ರಾಜ್ಯದಲ್ಲಿ ನೋಂದಣಿ ಮಾಡಿದ್ದು ಎಲ್ಲರಿಗೂ ಪರಿಹಾರ ಸಿಗಲಿದೆ ಎಂದರು.
Published On - 1:24 pm, Tue, 7 July 20