ಮಂಡ್ಯ ರಸ್ತೆ ಬದಿಯಲ್ಲಿ ರಾಶಿ ರಾಶಿ ದ್ರಾಕ್ಷಿ; ನಾ ಮುಂದು ತಾ ಮುಂದು ಎಂದು ಮುಗಿಬಿದ್ದ ಜನರು
ದ್ರಾಕ್ಷಿ ಬೆಲೆ ಸದ್ಯ ಕೆಜಿಗೆ 70-80 ರೂಪಾಯಿ. ಹೀಗೆ ಇದ್ದರೂ ರಸ್ತೆಗೆ ದ್ರಾಕ್ಷಿ ಸುರಿದು ಹೋಗಿದ್ದಾರೆ. ಅನುಮಾನದ ನಡುವೆಯೂ ದ್ರಾಕ್ಷಿಯನ್ನು ಜನರು ಬಾಚಿಕೊಂಡಿದ್ದಾರೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ದ್ರಾಕ್ಷಿಗಾಗಿ (Grapes) ಜನರು ಮುಗಿ ಬಿದ್ದಿದ್ದಾರೆ. ಈ ಘಟನೆ ಮಂಡ್ಯ ತಾಲೂಕಿನ ವಿ.ಸಿ ಫಾಂ ಗೇಟ್ ಬಳಿ ನಡೆದಿದೆ. ರಸ್ತೆ ಬದಿಯಲ್ಲಿ ಯಾರೋ ದ್ರಾಕ್ಷಿ ಸುರಿದು ಹೋಗಿದ್ದಾರೆ. ದ್ರಾಕ್ಷಿ ಬಾಚಿಕೊಳ್ಳಲು ಜನರು ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದಾರೆ. ವ್ಯಕ್ತಿ ಕ್ಯಾಂಟರ್ನಲ್ಲಿ ಬಂದು 80 ಕೆಜಿಗೂ ಹೆಚ್ಚು ದ್ರಾಕ್ಷಿ ಹಣ್ಣು ಸುರಿದು ಹೋಗಿದ್ದಾರೆ. ದ್ರಾಕ್ಷಿ ಬೆಲೆ ಸದ್ಯ ಕೆಜಿಗೆ 70-80 ರೂಪಾಯಿ. ಹೀಗೆ ಇದ್ದರೂ ರಸ್ತೆಗೆ ದ್ರಾಕ್ಷಿ ಸುರಿದು ಹೋಗಿದ್ದಾರೆ. ಅನುಮಾನದ ನಡುವೆಯೂ ದ್ರಾಕ್ಷಿಯನ್ನು ಜನರು ಬಾಚಿಕೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದು ವೇಸ್ಟ್ ಆಗಬಾರದೆಂದು ತುಂಬಿಕೊಳ್ಳುತ್ತಿದ್ದೇವೆ ಅಂತ ಜನ ಹೇಳುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos