ಶಿವಮೊಗ್ಗ: ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ಮಹಿಳೆ

Edited By:

Updated on: Oct 03, 2025 | 3:11 PM

ಮಾನಸಿಕ ಅಸ್ವಸ್ಥೆಯಾಗಿದ್ದ ತಾಯಿ, ಮಗಳನ್ನ ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶರಾವತಿ ನಗರದ ವಸತಿಗೃಹದಲ್ಲಿ ನಡೆದಿದೆ. ಲ್ಯಾಬ್ ಟೆಕ್ನಿಷಿಯನ್ ಆಗಿರುವ ರಾಮಣ್ಣ ಡ್ಯೂಟಿ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ, ಅಕ್ಟೋಬರ್​ 03: ಪುತ್ರಿಯನ್ನು ಕೊಂದು ತಾಯಿಯೂ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ (Shivamogga) ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶರಾವತಿ ನಗರದ ವಸತಿಗೃಹದಲ್ಲಿ ನಡೆದಿದೆ. ಪತಿ ರಾಮಣ್ಣ ಕೆಲಸಕ್ಕೆ ತೆರಳಿದ್ದ ವೇಳೆ 11 ವರ್ಷದ ಮಗಳು ಪೂರ್ವಿಕಾಳನ್ನ ಕೊಲೈಗದ ಶ್ರುತಿ (36) ತಾನೂ ನೇಣಿಗೆ ಶರಣಾಗಿದ್ದಾಳೆ. ಮೆಗ್ಗಾನ್​ ಜಿಲ್ಲಾಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಆಗಿರುವ ರಾಮಣ್ಣ ಡ್ಯೂಟಿ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶ್ರುತಿ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎನ್ನಲಾಗಿದೆ. ಆದಿಚುಂಚನಗಿರಿ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಾಂಗ ಮಾಡ್ತಿದ್ದ ಪೂರ್ವಿಕಾ, ರಾತ್ರಿ 10.30ಕ್ಕೆ ತಂದೆಗೆ ಕರೆ ಮಾಡಿದ್ದಳು. ಮಾತ್ರೆ ತೆಗೆದುಕೊಂಡ ತಾಯಿ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ತಂದೆಗೆ ತಿಳಿಸಿದ್ದಳು. ಈ ವೇಳೆ ಮಗಳಿಗೆ ಧೈರ್ಯ ಹೇಳಿದ್ದ ರಾಮಣ್ಣ, ಬೆಳಗ್ಗೆ ಮನೆಗೆ ಬಂದು ನೋಡಿದಾಗ ವಿಷಯ ಗೊತ್ತಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.