ಯಾದಗಿರಿ ಜಿಲ್ಲೆ ರಸ್ತೆಗಳು ಅಧ್ವಾನ, ಉಸ್ತುವಾರಿ ಸಚಿವ, ಶಾಸಕನನ್ನು ಜರಿಯುತ್ತಿರುವ ವಾಹನ ಚಾಲಕರು
ಭೀಮಾನದಿ ಸೇತುವೆ ಮೇಲೆ ರಸ್ತೆ ಅಧೋಗತಿ ತಲಪಿದೆ, 2-3 ಅಡಿ ಆಳದ ಗುಂಡಿಗಳು ನಿರ್ಮಾಣವಾಗಿವೆ ಎಂದು ವಾಹನ ಚಾಲಕರು ಹೇಳುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವನ ನಿರ್ಲಕ್ಷ್ಯ, ನಿಷ್ಕಾಳಜಿ, ಬೇಜವಾಬ್ದಾರಿತನ ಮತ್ತು ಡೆವಿಲ್ ಮೇ ಕೇರ್ ಧೋರಣೆಯಿಂದ ಜಿಲ್ಲೆಯ ಜನ ಬೇಸತ್ತಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಯಾದಗಿರಿ: ಯಾದಗಿರಿ ಮತ್ತು ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಇವತ್ತು ಸಹ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. 3-4 ದಿನಗಳಿಂದ ಮಳೆ ಸತತವಾಗಿ ಅಗುತ್ತಿರುವುದರಿಂದ ಸಿಂದಗಿ-ಕೊಡಂಗಲ್ ನಡುವಿನ ಹೆದ್ದಾರಿಯಲ್ಲಿ ಹೆಜ್ಜೆಗೊಂದು ಗುಂಡಿ ಬಿದ್ದು ವಾಹನಗಳ ಓಡಾಟ ದುಸ್ಸಾಧ್ಯವಾಗುತ್ತಿದೆ ಎಂದು ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರನ್ನು ಜನ ಮನಸಾರೆ ಜರಿಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೂಳು ತುಂಬಿ ರೈತರಿಗೆ ಕಣ್ಣೀರು ತರಸುತ್ತಿರುವ ಡೋಣಿ ನದಿ, ತಲೆ ಹಾಕದ ಜನಪ್ರತಿನಿಧಿಗಳು