ಬೀದರ್ ನಗರದ ಮನೆಯೊಂದರಲ್ಲಿ 5 ದಶಕಗಳಿಂದ ಬೆಳೆಯುತ್ತಿರುವ ಹುತ್ತ, ನಾಗಪಂಚಮಿಯಂದು ವಿಶೇಷ ಪೂಜೆ
ಹುತ್ತಕ್ಕೆ ಪೂಜೆ ಸಲ್ಲಿಸಿದ ಬಳಿಕ ತಮಗೆ ಒಳಿತಾಗಿದೆ ಎಂದು ಗೃಹಿಣಿಯರು ಹೇಳುತ್ತಾರೆ. ಒಬ್ಬ ಮಹಿಳೆ ತನಗೆ ಮಕ್ಕಳಿರಲಿಲ್ಲ, ಇಲ್ಲಿಗೆ ಬಂದು ಹುತ್ತಕ್ಕೆ ಪೂಜೆ ಮಾಡಿ ಹರಕೆ ಸಲ್ಲಿಸಿದ ಬಳಿಕ ಇಷ್ಟಾರ್ಥ ನೆರವೇರಿ ಸಂತಾನ ಭಾಗ್ಯ ಪ್ರಾಪ್ತವಾಗಿದೆ ಎಂದು ಹೇಳುತ್ತಾರೆ. ಯಾದಗಿರಿ ಜಿಲ್ಲೆಯ ಚಿಂತನಹಳ್ಳಿ ಎಂಬಲ್ಲಿ ಪಂಚಮಿಯಂದು ಚೇಳುಗಳು ಬಿಲದಿಂದ ಹೊರಬರುತ್ತವೆ, ಅದರೆ ಯಾರನ್ನೂ ಕುಟುಕಲ್ಲ, ಜನ ಅವುಗಳೊಂದಿಗೆ ಆಟವಾಡುತ್ತಾರೆ!
ಬೀದರ್, ಜುಲೈ 29: ಇವತ್ತು ನಾಗರಪಂಚಮಿ, ರಾಜ್ಯದೆಲ್ಲೆಡೆ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತಿದೆ. ನಾಗದೇವನಿಗೆ, ಹುತ್ತಗಳಿಗೆ (ant-hill) ಜನ ಪೂಜೆಗಳನ್ನು ಮಾಡುತ್ತಿದ್ದಾರೆ ಮತ್ತು ಹಾಲನ್ನುಣಿಸುತ್ತಿದ್ದಾರೆ. ಬೀದರ್ ನಗರದಲ್ಲಿ ಮನೆಯೊಂದರಲ್ಲೇ ಕಳೆದ 50 ವರ್ಷಗಳಿಂದ ಹುತ್ತ ಬೆಳೆದಿದ್ದು ಕೇವಲ ನಾಗರಪಂಚಮಿ ದಿನ ಮಾತ್ರ ಅಲ್ಲ ಬೇರೆ ಸಮಯದಲ್ಲೂ ಜನ ಬಂದು ಪೂಜೆ ಮಾಡುತ್ತಾರೆ. ಹುತ್ತಕ್ಕೆ ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಜನ ಹೇಳುತ್ತಾರೆ. ಹಬ್ಬದ ಸಂಭ್ರಮದಲ್ಲಿರುವ ಈ ಮನೆಯ ನೆರೆಹೊರೆಯವರು ಹುತ್ತಕ್ಕೆ ಪೂಜೆ ಸಲ್ಲಿಸಿದ ನಂತರ ನಮ್ಮ ಬೀದರ್ ಪ್ರತಿನಿಧಿಯೊಂದಿಗೆ ಮಾತಾಡಿದ್ದಾರೆ.
ಇದನ್ನೂ ಓದಿ: Naga Panchami 2025: ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಕಡುಬು ಮಾಡುವುದು ಯಾಕೆ? ಈ ಬಗ್ಗೆ ಅರ್ಚಕರು ಹೇಳೋದೇನು?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
