Video: ಕುತ್ತಿಗೆಗೆ ಗುಂಡೇಟು, ಎಲ್ಲೆಲ್ಲೂ ರಕ್ತ, ಬೈಕ್ನಲ್ಲಿ ಪೆಟ್ರೋಲ್ ಬಂಕ್ಗೆ ಬಂದು ಸಹಾಯ ಕೇಳಿದ ಯುವಕ
: ಗುಂಡೇಟು ತಿಂದ ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್ಗೆ ಬಂದು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತನ ಕುತ್ತಿಗೆಗೆ ಗುಂಡು ಹಾರಿಸಲಾಗಿತ್ತು. ಎಲ್ಲೆಲ್ಲೂ ರಕ್ತ, ಆ ನೋವಿನಲ್ಲೇ ಬೈಕ್ ಚಲಾಯಿಸಿಕೊಂಡು ಪೆಟ್ರೋಲ್ಬಂಕ್ಗೆ ಬಂದಿದ್ದು, ಅಲ್ಲಿ ಸಹಾಯಕ್ಕಾಗಿ ಎಲ್ಲರನ್ನೂ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 23 ವರ್ಷದ ತಾಜುದ್ದೀನ್ ಅಲಿಯಾಸ್ ಶಾನು ಅವರ ಕುತ್ತಿಗೆಗೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿತ್ತು.
ಲಕ್ನೋ, ಜುಲೈ 29: ಗುಂಡೇಟು ತಿಂದ ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್ಗೆ ಬಂದು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತನ ಕುತ್ತಿಗೆಗೆ ಗುಂಡು ಹಾರಿಸಲಾಗಿತ್ತು. ಎಲ್ಲೆಲ್ಲೂ ರಕ್ತ, ಆ ನೋವಿನಲ್ಲೇ ಬೈಕ್ ಚಲಾಯಿಸಿಕೊಂಡು ಪೆಟ್ರೋಲ್ಬಂಕ್ಗೆ ಬಂದಿದ್ದು, ಅಲ್ಲಿ ಸಹಾಯಕ್ಕಾಗಿ ಎಲ್ಲರನ್ನೂ ಕೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 23 ವರ್ಷದ ತಾಜುದ್ದೀನ್ ಅಲಿಯಾಸ್ ಶಾನು ಅವರ ಕುತ್ತಿಗೆಗೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿತ್ತು. ಶಾನು ಜೈಸ್ವಾಲ್ ಅವರ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಕತ್ರಾ-ಬಿಲ್ಹೌರ್ ಹೆದ್ದಾರಿಯಲ್ಲಿರುವ ಅಸ್ಮಾನಿ ಪ್ಯಾಲೇಸ್ ಬಳಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಶಾನು ಅವರನ್ನು ಪ್ರಥಮ ಚಿಕಿತ್ಸೆಗಾಗಿ ಮಲ್ಲವನ್ ಸಿಎಚ್‌ಸಿಗೆ ಕರೆದೊಯ್ದು, ಗಂಭೀರ ಗಾಯಗಳಾಗಿದ್ದರಿಂದ ಲಕ್ನೋದ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

