ಉಡುಪಿಯ ಬೈಂದೂರು ತಾಲ್ಲೂಕಿನಲ್ಲಿ ಶಂಕಿತ ನಕ್ಸಲರ ಚಲನವಲನ, ಗುಪ್ತಚರ ವಿಭಾಗಕ್ಕೆ ಮಾಹಿತಿ ರವಾನೆ

ಉಡುಪಿಯ ಬೈಂದೂರು ತಾಲ್ಲೂಕಿನಲ್ಲಿ ಶಂಕಿತ ನಕ್ಸಲರ ಚಲನವಲನ, ಗುಪ್ತಚರ ವಿಭಾಗಕ್ಕೆ ಮಾಹಿತಿ ರವಾನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 10, 2024 | 11:59 AM

ಹತ್ತು ವರ್ಷಗಳ ಹಿಂದೆ ಪೊಲೀಸ್ ಎನ್ ಕೌಂಟರ್ ನಡೆದ ನಂತರದ ದಿನಗಳಲ್ಲಿ ನಕ್ಸಲ್ ಚಟುವಟಿಕೆ ನಿಂತುಹೋಗಿದ್ದವು ಎಂದು ಹೇಳುವ ಶಾಜು ಅಂದು ಬೆಳಗ್ಗೆಯೇ ಬೆಂಗಳೂರು ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರಂತೆ. ಬೈಂದೂರು ಕಾಡು ಪ್ರದೇಶದಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.

ಉಡುಪಿ: ಜಿಲ್ಲೆಯಲ್ಲಿ ನಕ್ಸಲರ ಚಲನವಲನ (Naxal activity) ಪುನಃ ಆರಂಭವಾಗಿದೆಯೇ? ಜಿಲ್ಲೆಯ ಬೈಂದೂರು ಹತ್ತಿರದ ಕೊಲ್ಲೂರಿನ (Kollur) ಉದಯನಗರ ನಿವಾಸಿ ಶಾಜು (Shaju) ಹೇಳುವುದನ್ನು ಕೇಳಿದರೆ ಹೌದೆನಿಸುತ್ತದೆ. ಟಿವಿ9 ಉಡುಪಿ ವರದಿಗಾರನೊಂದಿಗೆ ಮಾತಾಡಿರುವ ಶಾಜು, ಎರಡು ದಿನಗಳ ಹಿಂದೆ ಬೆಳಗಿನ ಜಾವ 2.30 ರ ಹೊತ್ತಿಗೆ 5 ಜನರ ಗುಂಪೊಂದು ಅನುಮಾನಾಸ್ಪದವಾಗಿ ಓಡಾಡಿದ್ದನ್ನು ಕಂಡೆನೆಂದು ಹೇಳುತ್ತಾರೆ. ನಾಯಿಗಳು ಬೊಗಳಿದ ಕಾರಣ ಎಚ್ಚರವಾಗಿ ಹೊರಬಂದು ನೋಡಿದಾಗ, ಮಂಕಿ ಕ್ಯಾಪ್ ಗಳನ್ನು ಧರಿಸಿದ್ದ ಅವರೆಲ್ಲರ ಬೆನ್ನಿನ ಮೇಲೆ ಬ್ಯಾಗುಗಳಿದ್ದವು ಮತ್ತು ಐವರ ಪೈಕಿ ಇಬ್ಬರ ಕೈಯಲ್ಲಿ ಕೋವಿಗಳಿದ್ದವು ಎಂದು ಶಾಜು ಹೇಳುತ್ತಾರೆ. ಬೈಂದೂರು ತಾಲ್ಲೂಕಿನಲ್ಲಿ ಶಂಕಿತ ನಕ್ಸಲರು ಓಡಾಡುತ್ತಿರುವ ಬಗ್ಗೆ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಶಾಜು ಹೇಳುತ್ತಿರುವ ಸಂಗತಿ ಮಹತ್ವ ಪಡೆದುಕೊಳ್ಳುತ್ತದೆ. ಹತ್ತು ವರ್ಷಗಳ ಹಿಂದೆ ಪೊಲೀಸ್ ಎನ್ ಕೌಂಟರ್ ನಡೆದ ನಂತರದ ದಿನಗಳಲ್ಲಿ ನಕ್ಸಲ್ ಚಟುವಟಿಕೆ ನಿಂತುಹೋಗಿದ್ದವು ಎಂದು ಹೇಳುವ ಶಾಜು ಅಂದು ಬೆಳಗ್ಗೆಯೇ ಬೆಂಗಳೂರು ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರಂತೆ. ಬೈಂದೂರು ಕಾಡು ಪ್ರದೇಶದಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ