ದರ್ಶನ್ಗೆ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಛಲ ಬಂದಿದ್ದು ಹೇಗೆ?
ದರ್ಶನ್ ಇಂದು ಕೊಲೆ ಆರೋಪಿ, ಅವರ ವ್ಯಕ್ತಿತ್ವದ ಬಗ್ಗೆ ಈ ಹಿಂದೆಯೂ ಟೀಕೆಗಳಿದ್ದವು, ಹಾಗೆಂದು ಅವರು ಬೆಳೆದು ಬಂದ ಹಾದಿಯನ್ನು ಮೆಚ್ಚದೇ ಇರಲಾಗದು. ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ದರ್ಶನ್ರ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ದರ್ಶನ್ (Darshan Thoogudeepa) ಇಂದು ಕೊಲೆ ಆರೋಪಿ, ದರ್ಶನ್ರ ವ್ಯಕ್ತಿತ್ವದ ಬಗ್ಗೆ ಈ ಹಿಂದೆಯೂ ಟೀಕೆಗಳು ವ್ಯಕ್ತವಾಗಿದ್ದವು. ಸದಾ ಒಂದಿಲ್ಲೊಂದು ವಿವಾದದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಲೇ ಇತ್ತು. ಅದೆಲ್ಲ ಏನೇ ಇದ್ದರು, ದರ್ಶನ್ ಕಷ್ಟಪಟ್ಟು ಸಿನಿಮಾ ನಾಯಕರಾದವರು, ಅವರು ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟ ಇದನ್ನೆಲ್ಲ ನಿರ್ಲಕ್ಷಿಸುವಂತಿಲ್ಲ. ದರ್ಶನ್ರ ಆಪ್ತ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು, ದರ್ಶನ್ ಬೆಳೆದು ಬಂದ ರೀತಿಯ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ. ತಾನು ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ದರ್ಶನ್ಗೆ ಅನ್ನಿಸಿದ್ದು ಯಾವಾಗ? ಅದಕ್ಕೆ ಕಾರಣವಾದ ಘಟನೆಗಳೇನು? ಈ ಕುರಿತು ಗಣೇಶ್ ಕಾಸರಗೋಡು ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 20, 2024 12:45 PM