Viral Video:  ತುಳು ಯಕ್ಷಗಾನ ಪ್ರಸಂಗದಲ್ಲೂ ʼದರ್ಶನ್‌-ಪವಿತ್ರʼ ಹವಾ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌, ಪವಿತ್ರ ಗೌಡ ಸೇರಿದಂತೆ ಇತರೆ 10 ಜನರನ್ನು ಬಂಧಿಸಲಾಗಿದೆ. ಈ ಕೊಲೆ ಪ್ರಕರಣ ದಿನ ಕಳೆದಂತೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಧ್ಯಮ ಸೋಷಿಯಲ್‌ ಮೀಡಿಯಾದಗಳಲ್ಲಿ ಈ ಪ್ರಕರಣದ್ದೇ ಸುದ್ದಿ. ಇದೀಗ ದರ್ಶನ್‌, ಪವಿತ್ರ ಮ್ಯಾಟರ್ ಯಕ್ಷಗಾನಕ್ಕೂ ಎಂಟ್ರಿ ಕೊಟ್ಟಿದ್ದು, ಈ ಕುರಿತ ವಿಡಿಯೋ ತುಣುಕೊಂದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ‌

Viral Video:  ತುಳು ಯಕ್ಷಗಾನ ಪ್ರಸಂಗದಲ್ಲೂ ʼದರ್ಶನ್‌-ಪವಿತ್ರʼ ಹವಾ
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 21, 2024 | 12:43 PM

ನಟಿ ಪವಿತ್ರ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರ ಗೌಡ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ. ಈ ಕೊಲೆ ಕೇಸ್‌ ಸದ್ಯ ಸಂಚಲನ ಸೃಷ್ಟಿಸಿದ್ದು, ಸುದ್ದಿ ಮಾಧ್ಯಮ, ಟ್ರೋಲ್‌ ಪೇಜ್‌,  ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕೊಲೆ ಪ್ರಕರಣ ಸುದ್ದಿಯದ್ದೇ ಚರ್ಚೆ ನಡೆಯುತ್ತಿದೆ. ಇದೀಗ ನಟ ದರ್ಶನ್‌ ಮತ್ತು ಪವಿತ್ರಾ ಮ್ಯಾಟರ್ ಯಕ್ಷಗಾನ ಪ್ರಸಂಗಕ್ಕೂ ಎಂಟ್ರಿ ಕೊಟ್ಟಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ. ‌

ಯಕ್ಷಗಾನ ಪ್ರಸಂಗದಲ್ಲಿ ಕೆಲಮೊಮ್ಮೆ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳೂ ಕೂಡಾ ನಡೆಯುತ್ತವೆ. ಈ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಇತ್ತೀಚಿಗಷ್ಟೇ ಯಕ್ಷಗಾನ ಪ್ರಸಂಗವೊಂದರಲ್ಲಿ ಪ್ರಜ್ವಲ್‌ ರೇವಣ್ಣ ಹೆಸರು ಕೂಡಾ ಪ್ರಸ್ತಾಪವಾಗಿತ್ತು. ಈ ವಿಡಿಯೋವಂತೂ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ತುಳು ಯಕ್ಷಗಾನ ಬಯಲಾಟವೊಂದರಲ್ಲಿ ರಂಗಸ್ಥಳದಲ್ಲಿ ಹಾಸ್ಯಕಲಾವಿದರ ನಡುವೆ ನಡೆದ ಸಂಭಾಷಣೆಯಲ್ಲಿ  ದರ್ಶನ್‌ ಮತ್ತು ಪವಿತ್ರಾ ಹೆಸರು ಪ್ರಸ್ತಾಪವಾಗಿದೆ.  ಈ ವಿಡಿಯೋ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು ಸ್ವಸ್ತಿಕ್‌ ಕನ್ಯಾಡಿ (@swasthik_kanyadi) ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಯಕ್ಷಗಾನದಲ್ಲಿ ದರ್ಶನ್-ಪವಿತ್ರ ಮ್ಯಾಟರ್‌” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಯಕ್ಷಗಾನ ಬಯಲಾಟದಲ್ಲಿ ಹಾಸ್ಯಕಲಾವಿದರು ದರ್ಶನ್‌ ಮತ್ತು ಪವಿತ್ರ ಹೆಸರನ್ನು ಪ್ರಸ್ತಾಪಿಸಿದ ದೃಶ್ಯವನ್ನು ಕಾಣಬಹುದು. ಅದರಲ್ಲಿ ಒಬ್ಬ ಕಲಾವಿದ ಶನಿವಾರ ದರ್ಶನ್‌ ಬೇಕೇ ಬೇಕು ಎಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ದರ್ಶನ್‌ ಬೇಡ, ದರ್ಶನದ ವ್ಯವಸ್ಥೆ ಮಾಡಿದ್ರೆ ನಾವು ಕೂಡಾ ಒಳಗೆ ಇರ್ಬೇಕಾಗುತ್ತದೆ. ದರ್ಶನವೂ ಬೇಡ ಪವಿತ್ರವೂ ಬೇಡ ಎಂದು ಹೇಳುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪ್ರತಿನಿತ್ಯ ಪೂಜಾ ಸಮಯದಲ್ಲಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡುವ ಶ್ವಾನ; ಇಲ್ಲಿದೆ ನೋಡಿ ವಿಡಿಯೋ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ  11 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಹಾಸ್ಯಮಯ ದೃಶ್ಯ ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:50 am, Thu, 20 June 24

ತಾಜಾ ಸುದ್ದಿ
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ
ಕೇಂಪೇಗೌಡ 515ನೇ ಜಯಂತಿ: ನಾಡಪ್ರಭುಗೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ
ಕೇಂಪೇಗೌಡ 515ನೇ ಜಯಂತಿ: ನಾಡಪ್ರಭುಗೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ
ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಹಲವಾರು ಸಚಿವರನ್ನು ಭೇಟಿಯಾಗಲಿರುವ ಸಿಎಂ
ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಹಲವಾರು ಸಚಿವರನ್ನು ಭೇಟಿಯಾಗಲಿರುವ ಸಿಎಂ
ಉಕ್ಕಿ ಹರಿಯುತ್ತಿದೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಸೂಚನೆ
ಉಕ್ಕಿ ಹರಿಯುತ್ತಿದೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಸೂಚನೆ
ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ವಿಡಿಯೋ ನೋಡಿ
ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ವಿಡಿಯೋ ನೋಡಿ
ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ನೀರಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ
ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ನೀರಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ
ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ 8 ವಾಹನಗಳ ಮೇಲೆ ಕಲ್ಲು ಎಸೆದ ಯುವಕ
ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ 8 ವಾಹನಗಳ ಮೇಲೆ ಕಲ್ಲು ಎಸೆದ ಯುವಕ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ