AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guinness World Records: ಗಿನ್ನೆಸ್​​ ವಿಶ್ವ ದಾಖಲೆ ಬರೆದ ವಿಶ್ವದ ಅತ್ಯಂತ ದುಬಾರಿ ಬರ್ಗರ್​​; ಇದರ​​ ಬೆಲೆ ಬರೋಬ್ಬರಿ 5ಲಕ್ಷ ರೂ.

ಈ ವಿಶೇಷ ಬರ್ಗರ್​​ ಅನ್ನು ನೆದರ್‌ಲ್ಯಾಂಡ್ಸ್‌ನ ಬಾಣಸಿಗ ರಾಬರ್ಟ್ ಜಾನ್ ಡಿ ವೀನ್ ತಯಾರಿಸಿದ್ದಾರೆ. ಮೇಲ್ಪದರ ಸಂಪೂರ್ಣ ಚಿನ್ನದಿಂದ ಲೇಪಿತವಾಗಿದ್ದು, ಈ ಬರ್ಗರ್​​ಗೆ 'ದಿ ಗೋಲ್ಡನ್ ಬಾಯ್' ಎಂದು ಹೆಸರಿಸಲಾಗಿದೆ. ಇದರ ಬೆಲೆ $5,967 ಅಂದರೆ ಭಾರತೀಯ ಕರೆನ್ಸಿನ ಪ್ರಕಾರ 4,97,813 ರೂ.

Guinness World Records: ಗಿನ್ನೆಸ್​​ ವಿಶ್ವ ದಾಖಲೆ ಬರೆದ ವಿಶ್ವದ ಅತ್ಯಂತ ದುಬಾರಿ ಬರ್ಗರ್​​; ಇದರ​​ ಬೆಲೆ ಬರೋಬ್ಬರಿ 5ಲಕ್ಷ ರೂ.
Most expensive hamburger
ಅಕ್ಷತಾ ವರ್ಕಾಡಿ
|

Updated on: Jun 20, 2024 | 12:56 PM

Share

ಲಕ್ಷ ಲಕ್ಷ ಬೆಲೆ ಬಾಳುವ ಬರ್ಗರ್​​ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ. ಈ ಬರ್ಗರ್​ ಬೆಲೆ ಬರೋಬ್ಬರಿ 5ಲಕ್ಷ ರೂಪಾಯಿ. ಇದೀಗ ಗಿನ್ನೆಸ್​​ ವಿಶ್ವ ದಾಖಲೆ ಪುಟದಲ್ಲಿ ವಿಶ್ವದ ಅತ್ಯಂತ ದುಬಾರಿ ಬರ್ಗರ್​​ ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಸ್ವತಹ ಗಿನ್ನೆಸ್​​ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಇದರ ಬೆಲೆ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಈ ವಿಶೇಷ ಬರ್ಗರ್​​ ಅನ್ನು ನೆದರ್‌ಲ್ಯಾಂಡ್ಸ್‌ನ ಬಾಣಸಿಗ ರಾಬರ್ಟ್ ಜಾನ್ ಡಿ ವೀನ್ ತಯಾರಿಸಿದ್ದು, ಇದನ್ನು ಗೆಲ್ಡರ್‌ಲ್ಯಾಂಡ್‌ನ ವೋರ್ಥುಜೆನ್‌ನಲ್ಲಿರುವ ದಿ ಡಾಲ್ಟನ್ಸ್ ರೆಸ್ಟೋರೆಂಟ್‌ನ ಮೆನುವಿನಲ್ಲಿ ವಿಶ್ವದ ಅತ್ಯಂತ ದುಬಾರಿ ಬರ್ಗರ್​ ಎಂದು ಇರಿಸಲಾಗಿದೆ. ಮೇಲ್ಪದರ ಸಂಪೂರ್ಣ ಚಿನ್ನದಿಂದ ಲೇಪಿತವಾಗಿದ್ದು, ಈ ಬರ್ಗರ್​​ಗೆ ‘ದಿ ಗೋಲ್ಡನ್ ಬಾಯ್’ ಎಂದು ಹೆಸರಿಸಲಾಗಿದೆ. ಇದರ ಬೆಲೆ $5,967 ಅಂದರೆ ಭಾರತೀಯ ಕರೆನ್ಸಿನ ಪ್ರಕಾರ 4,97,813 ರೂ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹಾಸಿಗೆ ಹಿಡಿದ ಅಭಿಮಾನಿಯ ಕುಟುಂಬವನ್ನು ದತ್ತು ಪಡೆದ ನಟ ಮಹೇಶ್ ಬಾಬು

@guinnessworldrecords ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಜೂನ್​​ 19ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ ಮೂರುಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 11 ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ಲೈಕ್ಸ್​​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ