Viral Video: ಪ್ರತಿನಿತ್ಯ ಪೂಜಾ ಸಮಯದಲ್ಲಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡುವ ಶ್ವಾನ; ಇಲ್ಲಿದೆ ನೋಡಿ ವಿಡಿಯೋ
ಈ ಜಗತ್ತಿನಲ್ಲಿ ನಡೆಯುವ ಕೆಲವೊಂದು ಅಚ್ಚರಿಯ ಘಟನೆಗಳು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಹೀಗೂ ನಡೆಯುದುಂಟೇ ಎಂದು ನಮ್ಮಲ್ಲಿಯೇ ಸಾವಿರ ಪ್ರಶ್ನೆಯನ್ನು ಮೂಡಿಸುತ್ತವೆ. ಇದೀಗ ಅಂತಹದೇ ಅಚ್ಚರಿಯ ಘಟನೆಯೊಂದು ನಡೆದಿದ್ದು, ಶ್ವಾನವೊಂದು ಪ್ರತಿನಿತ್ಯ ಪೂಜೆಯ ಸಮಯಕ್ಕೆ ಸರಿಯಾಗಿ ಆಂಜನೇಯನ ದೇವಾಲಕ್ಕೆ ಭೇಟಿ ನೀಡಿ ದೇವರ ಕಾರ್ಯದಲ್ಲಿ ಭಾಗಿಯಾಗುತ್ತಿದೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಮನುಷ್ಯರಾದ ನಾವು ಮನಸ್ಸಿಗೆ ನೆಮ್ಮದಿ ಸಿಗಲೆಂದು ಆಗಾಗ್ಗೆ ದೇವಾಲಯಗಳಿಗೆ ಹೋಗುತ್ತಿರುತ್ತವೆ. ಭಕ್ತಿಪೂರ್ವಕವಾಗಿ ಕೈಮುಗಿದು ಸಕಲ ಇಷ್ಟಾರ್ಥಗಳನ್ನು ಪೂರೈಸುವಂತೆ ದೇವರಲ್ಲಿ ಬೇಡಿಕೊಳ್ಳುತ್ತೇವೆ. ನಾವೆಲ್ಲರು ದೇವಾಲಯಕ್ಕೆ ಭೇಟಿ ನೀಡುವಂತಹದ್ದು, ಭಕ್ತಿಪೂರ್ವಕವಾಗಿ ದೇವರ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಆದರೆ ನೀವು ಎಂದಾದರೂ ಪ್ರಾಣಿಗಳು ದೇವಾಲಯಗಳಿಗೆ ಬಂದು ಪ್ರಾರ್ಥನೆ ಸಲ್ಲಿಸುವುದನ್ನು ನೋಡಿದ್ದೀರಾ? ಅರೇ ಪ್ರಾಣಿಗಳು ದೇವಾಲಯಗಳಿಗೆ ಹೋಗುವುದುಂಟೆ, ಅವುಗಳಿಗೆ ಪೂಜೆ, ದೇವರ ಭಕ್ತಿ ಇತ್ಯಾದಿಗಳ ಬಗ್ಗೆ ಹೇಗೆ ಗೊತ್ತಿರಲು ಸಾಧ್ಯ ಅಂತ ನೀವು ಯೋಚನೆ ಮಾಡ್ಬೋದು. ಹೀಗಿರುವಾಗ ಇಲ್ಲೊಂದು ಶ್ವಾನ ಪ್ರತಿನಿತ್ಯ ಸಂಜೆ 7.30 ರ ಸುಮಾರಿಗೆ ಪೂಜೆಯ ಸಮಯದಲ್ಲಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಭಕ್ತಿ ಪೂರ್ವಕವಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತದೆಯಂತೆ. ಈ ಅಪರೂಪದ ಘಟನೆ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ.
ಈ ವಿಡಿಯೋವನ್ನು ಮುಂಬೈ ನಗರದ ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ್ ಕುಡಲ್ಕರ್ (@sudhurkudaklar) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವಿಡಿಯೋ ಮಾಡುತ್ತಿದ್ದಂತಹ ಯುವಕ ಪ್ರತಿ ದಿನ ಸಂಜೆ 7.30 ರ ಸುಮಾರಿಗೆ ಈ ಆಂಜನೇಯ ದೇವಾಲಯದಲ್ಲಿ ಮಂಗಳಾರತಿ ನಡೆಯುತ್ತದೆ. ಈ ಸಮಯಕ್ಕೆ ಸರಿಯಾಗಿ ಈ ಶ್ವಾನವು ಇಲ್ಲಿಗೆ ಬರುತ್ತದೆ ಎಂದು ಹೇಳುತ್ತಿರುವುದನ್ನು ಕಾಣಬಹುದು. ದೇವಾಲಯದ ಅರ್ಚಕರು ಶಂಖ ಊದುವಾಗ ಶ್ವಾನ ಕೂಡಾ ಶಂಖದ ಸದ್ದಿನಂತೆ ಕೂಗಿ, ಆಂಜನೇಯನಿಗೆ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸುತ್ತದೆ. ಈ ಅಚ್ಚರಿಯ ಘಟನೆ ಎಲ್ಲಿ ನಡೆದಿದ್ದು ಎಂಬುದು ಇನ್ನೂ ತಿಳಿದು ಬಂದಿಲ್ಲ.
View this post on Instagram
ಇದನ್ನೂ ಓದಿ: ಜೀವದ ಗೆಳತಿಯರು ಸೇರಿ ಶುರು ಮಾಡಿದ ಗೌಡತಿ’ಸ್ ಕಿಚನ್, ಇದು ಮಹಿಳೆಯರ ಸ್ಫೂರ್ತಿ ಕಥೆ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಎಂತಹ ಅದ್ಭುತ ದೃಶ್ಯವಿದು ಎಂದು ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: