Viral Video: ಜೀವದ ಗೆಳತಿಯರು ಸೇರಿ ಶುರು ಮಾಡಿದ ಗೌಡತಿ’ಸ್​​​ ಕಿಚನ್, ಇದು ಮಹಿಳೆಯರ ಸ್ಫೂರ್ತಿ ಕಥೆ  

ನಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಜಯಿಬಹುದು. ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಯಾರ ಸಹಾಯವೂ ಇಲ್ಲದೇ ಬರೀ ಮೂವರು ಗೆಳತಿಯರೇ ಸೇರಿ ಹೋಟೆಲ್‌ ಉದ್ಯಮವೊಂದನ್ನು ಆರಂಭಿಸಿ, ಯಶಸ್ವಿ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಈ ವಿಡಿಯೋ ನೋಡಿ, ಇದ್ದರೆ ಸ್ನೇಹಿತರು ಹೀಗಿರಬೇಕು  ಅಂತಿದ್ದಾರೆ ನೆಟ್ಟಿಗರು. 

Viral Video: ಜೀವದ ಗೆಳತಿಯರು ಸೇರಿ ಶುರು ಮಾಡಿದ ಗೌಡತಿ'ಸ್​​​ ಕಿಚನ್, ಇದು ಮಹಿಳೆಯರ ಸ್ಫೂರ್ತಿ ಕಥೆ  
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 19, 2024 | 3:09 PM

ಸ್ನೇಹ ಎಂಬುದು ಅದ್ಭುತ ಸಂಪತ್ತು, ಬದುಕೊಗೊಂದು ಧೈರ್ಯ ಮತ್ತು ಶಕ್ತಿ ಅಂತಾನೇ ಹೇಳಬಹುದು. ಜೀವನದಲ್ಲಿ ಸುಖ, ದುಃಖದಲ್ಲಿ ಜೊತೆಯಾಗಿರುವರೇ ನಿಜವಾದ ಸ್ನೇಹಿತರು. ನಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಏನನ್ನೂ ಬೇಕಾದರೂ ಜಯಿಸಬಹುದು. ಈ ರೀತಿಯ  ಅಪೂರ್ವ ಸ್ನೇಹ ಬಂಧವನ್ನು ನೋಡುವ ಖುಷಿಯೇ ಬೇರೆ. ಇದೀಗ ಇಂತಹದೇ ಅಪೂರ್ವ ಸ್ನೇಹ ಬಂಧದ ವಿಡಿಯೋವೊಂದು ವೈರಲ್‌ ಆಗಿದ್ದು, ಯಾರ ಸಹಾಯವೂ ಇಲ್ಲದೇ ಮೂವರು ಗೆಳತಿಯರು ಸೇರಿ ಹೋಟೆಲ್‌ ಉದ್ಯಮವನ್ನು ಆರಂಭಿಸಿ, ಅದರಲ್ಲಿ ಯಶಸ್ಸನ್ನು ಕಂಡ ಜೀವದ ಗೆಳತಿಯರ ಕಥೆಯನ್ನು ನೋಡಿ ಇದ್ದರೆ ಸ್ನೇಹಿತರು ಹೀಗಿರಬೇಕು ನೋಡಿ ಅಂತಿದ್ದಾರೆ ನೆಟ್ಟಿಗರು.

ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಬಾಲ್ಯ ಸ್ನೇಹಿತೆಯರು, ಹೀಗೆ ಎಷ್ಟು ಅಂತ ಬೇರೆಯವರ ಕೈಕೆಳಗೆ ಕೆಲಸ ಮಾಡುವುದು ನಾವೇ ಏನಾದ್ರೂ ಉದ್ಯಮವನ್ನು ಶುರು ಮಾಡಬೇಕೆಂದು ಯೋಜಿಸಿ ಬೆಂಗಳೂರಿನ ತಲಘಟ್ಟಪುರದ ಸಿಲ್ಕ್‌ ಇನ್‌ಸ್ಟಿಟ್ಯೂಟ್‌ ಮೆಟ್ರೋ ನಿಲ್ದಾಣದ ಬಳಿ ಗೌಡಿತಿ’ಸ್​​  ಕಿಚನ್ ಎಂಬ ಹೋಟೆಲ್‌ ಒಂದನ್ನು ಶುರು ಮಾಡುತ್ತಾರೆ. ಹೀಗೆ ಮನೆಯಲ್ಲಿಯೇ ತಯಾರಿಸಿದ ಮಸಾಲೆಗಳನ್ನು ಬಳಸಿ ಗ್ರಾಹಕರಿಗೆ ರುಚಿರುಚಿಯಾದ ಭಕ್ಷ್ಯಗಳನ್ನು ಮಾಡಿ ಬಡಿಸುವ ಈ ಗೆಳತಿಯರು ಇಂದು ಯಶಸ್ವಿ ಹೋಟೆಲ್‌ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಈ ಕುರಿತ ವಿಡಿಯೋವೊಂದನ್ನು @nimge_idu_gotha ಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಮೂವರು ಬಾಲ್ಯದ  ಗೆಳತಿಯರು ಜೊತೆ ಸೇರಿ ಹೇಗೆ ಯಶಸ್ವಿ ಹೋಟೆಲ್‌ ಉದ್ಯಮವನ್ನು ಆರಂಭಿಸಿದರು ಎಂಬ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮುದ್ದು ಕಂದನ ಬಾಯಲ್ಲಿ ಐಗಿರಿ ನಂದಿನಿ ಸ್ತೋತ್ರ, ನೀವು ಮಂತ್ರಮುಗ್ಧರಾಗುವುದು ಖಂಡಿತ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಹಲವರು ಈ ಮೂವರು ಗೆಳತಿಯರ ಸ್ಫೂರ್ತಿದಾಯಕ ಕಥೆಯನ್ನು ಮೆಚ್ಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: