Viral Video: ಮುದ್ದು ಕಂದನ ಬಾಯಲ್ಲಿ ಐಗಿರಿ ನಂದಿನಿ ಸ್ತೋತ್ರ, ನೀವು ಮಂತ್ರಮುಗ್ಧರಾಗುವುದು ಖಂಡಿತ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಾವಳಿಗಳು ಮಾತ್ರ ನಮ್ಮ ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಸದ್ಯ ಅಂತಹದೇ ಸುಂದರವಾದ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಮೂರುವರೆ ವರ್ಷದ ಪುಟ್ಟ ಕಂದಮ್ಮ ಹಾಡಿದ ಐಗಿರಿ ನಂದಿನಿ ಸ್ತೋತ್ರವನ್ನು ಕೇಳಿ ನೆಟ್ಟಿಗರು ಮನಸೋತಿದ್ದಾರೆ.

Viral Video: ಮುದ್ದು ಕಂದನ ಬಾಯಲ್ಲಿ ಐಗಿರಿ ನಂದಿನಿ ಸ್ತೋತ್ರ, ನೀವು ಮಂತ್ರಮುಗ್ಧರಾಗುವುದು ಖಂಡಿತ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 19, 2024 | 12:51 PM

ಮುದ್ದು ಮಕ್ಕಳ ಮಾತು, ಅವರ ಆಟ-ತುಂಟಾಟಗಳನ್ನು ನೋಡುವುದೇ ಚೆಂದ. ನಮ್ಮ ಮನಸ್ಸಿನ ಎಲ್ಲಾ ನೋವುಗಳನ್ನು ದೂರ ಮಾಡುವ ಶಕ್ತಿ ದೇವರಂತ ಪುಟಾಣಿ ಮಕ್ಕಳಿಗಿದೆ. ಅದರಲ್ಲೂ  ಈ ಮುದ್ದು ಪುಟಾಣಿಗಳ ಬಾಯಲ್ಲಿ ಹಾಡುಗಳನ್ನು ಕೇಳುವುದು ಇನ್ನೂ ಚೆನ್ನ. ಮುದ್ದು ಮಕ್ಕಳು ಗಾಯನ ಕಲೆಗೆ ಸಂಬಂಧಿಸಿದ  ಅನೇಕ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಸದ್ಯ ಅಂತಹದೇ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ಪುಟಾಣಿ ಹೆಣ್ಣು ಮಗುವೊಂದು ಭಕ್ತಿಯಿಂದ ಐಗಿರಿ ನಂದಿನಿ ಸ್ತೋತ್ರ  ಹಾಡಿದೆ. ಮಗುವಿನ ಕಂಠಸಿರಿಯಲ್ಲಿ ಮೂಡಿಬಂದ ಈ ಅದ್ಭುತ ಗಾಯನವನ್ನು ಕಂಡು ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

ಸಿಂಗರ್‌ ಸೌರಭ್‌ ದಫ್ತರ್ದಾರ್‌ ಅವರ ಮುದ್ದು ಮಗಳು ಅಂತರಾ ಐಗಿರಿ ನಂದಿನಿ ಸ್ತೋತ್ರವನ್ನು ಹಾಡಿದ್ದು, ಈ ಮುದ್ದಾದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು ಸೌರಭ್‌ (@saurabhdaftarda) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಸಿಂಗರ್‌ ಸಿಂಗರ್‌ ಸೌರಭ್‌ ದಫ್ತರ್ದಾರ್‌ ಅವರ ಮೂರುವರೆ ವರ್ಷದ ಮಗಳು “ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನ ನಂದಿನುತೇ ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ” ದೇವಿ ಶ್ಲೋಕವನ್ನು ಜಪಿಸುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತನ್ನ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವತಿ ಸಾವು

ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಮಗುವಿನ ಕಂಠದಲ್ಲಿ ಮೂಡಿಬಂದ ದೇವಿಯ ಭಜನೆಯನ್ನು ಕೇಳಿ ನೆಟ್ಟಿಗರು ಭಾವುಕರಾಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:54 am, Wed, 19 June 24