Viral Video: ಆಕಾಶದಲ್ಲಿ ಮೂರ್ಛೆ ಹೋದಂತೆ ನಟಿಸಿದ ಪೈಲಟ್; ಕಂಗಾಲಾದ ಪ್ರಯಾಣಿಕರು
@RestrictedVids ಎಂಬ ಟ್ವಿಟರ್ ಖಾತೆಯಲ್ಲಿ ಜೂನ್ 15ರಂದು ಪೈಲಟ್ ಆಕಾಶದಲ್ಲಿ ಮೂರ್ಛೆ ಹೋದಂತೆ ನಟಿಸಿದ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ನಾಲ್ಕು ದಿನಗಳಲ್ಲಿ 11.6 ಮಿಲಿಯನ್ ಅಂದರೆ 1 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಆಕಾಶದಲ್ಲಿ ಮೂರ್ಛೆ ಹೋದಂತೆ ನಟಿಸಿದ ಪೈಲಟ್ ಒಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪೈಲಟ್ ಜೊತೆಗೆ ದಂಪತಿಯೊಂದು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಇದಕ್ಕಿದ್ದಂತೆ ಪೈಲಟ್ ಮೂರ್ಛೆ ಹೋದಂತೆ ನಟಿಸಿದ್ದು, ಇದನ್ನು ಕಂಡು ಹಿಂದೆ ಕುಳಿತಿದ್ದ ಜೋಡಿ ಹೆದರಿ ಹೋಗಿದ್ದಾರೆ. ಅವರು ಪೈಲಟ್ನ್ನು ಎಚ್ಚರಿಸಲು ಸಾಹಸ ಪಡುತ್ತಿರುವುದನ್ನು ಕಾಣಬಹುದು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
@RestrictedVids ಎಂಬ ಟ್ವಿಟರ್ ಖಾತೆಯಲ್ಲಿ ಜೂನ್ 15ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ನಾಲ್ಕು ದಿನಗಳಲ್ಲಿ 11.6 ಮಿಲಿಯನ್ ಅಂದರೆ 1 ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ಬಂದಿರುವುದನ್ನು ಕಾಣಬಹುದು. “ಇದು ತಮಾಷೆಯಲ್ಲ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
— Restricted Vids (@RestrictedVids) June 15, 2024
ಇದನ್ನೂ ಓದಿ: ಅಮೇಜಾನ್ ಪಾರ್ಸೆಲ್ನಲ್ಲಿ ಬಂದ ನಾಗಪ್ಪ, ಬುಸುಗುಟ್ಟುತ್ತಿರುವ ಹಾವು ಕಂಡು ಬೆಚ್ಚಿಬಿದ್ದ ದಂಪತಿ
ವೈರಲ್ ಆಗಿರುವ ವಿಡಿಯೋದಲ್ಲಿ ಪೈಲಟ್ ಮೂರ್ಛೆ ಹೋದಂತೆ ನಟಿಸಿದ್ದು, ಇದು ದಂಪತಿಗಳಿಗೆ ತಿಳಿದಿಲ್ಲ. ಕೆಲ ಹೊತ್ತಿನ ಬಳಿಕ ಪೈಲಂಟ್ ಏಳದೇ ಇರುವ ಕಾರಣ ದಂಪತಿಗಳಿಗೆ ಭಯ ಹುಟ್ಟಿದೆ. ಮಹಿಳೆಯಂತೂ ಅಳುತ್ತಿರುವುದನ್ನು ಕಾಣಬಹುದು. ಆಕೆಯ ಗಂಡ ಪೈಲೆಟ್ನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:56 pm, Wed, 19 June 24