ಬಿಜೆಪಿ ಸಂಸದ ಬಿ ವೈ ರಾಘವೇಂದ್ರಗೆ ರಾಜಕಾರಣದ ಜೊತೆ ಕುಣಿತವೂ ಗೊತ್ತು!
ಸೋಮವಾರದಂದೇ ಸಂಸದ ಬಿ ವೈ ರಾಘವೇಂದ್ರ ಅವರು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದ ವಿಡಿಯೋ ನಮಗೆ ಇಂದು ಸಿಕ್ಕಿದೆ.
ಶಿವಮೊಗ್ಗ: ಬಿಜೆಪಿ ನಾಯಕರಿಗೆ ಕುಣಿತದ ಮೇಲಿರುವ ವ್ಯಾಮೋಹ ಕುರಿತು ನಾವು ಮಾತಾಡುತ್ತಲೇ ಇದ್ದೇವೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಎಮ್ ಟಿ ಬಿ ನಾಗರಾಜ ಮತ್ತು ಎಸ್ ಆರ್ ವಿಶ್ವನಾಥ (SR Vishwanath) ಕುಣಿದಾಡಿದರು, ನಿನ್ನೆ (ಸೋಮವಾರ) ಸೂಲಿಬೆಲೆಯಲ್ಲಿ ನಾಗರಾಜ್ ಮತ್ತು ಮೊಣಕಾಲ್ಮೂರು ನಲ್ಲಿ ಬಿ ಶ್ರೀರಾಮುಲು ಕುಣಿದರು. ಸೋಮವಾರದಂದೇ ಸಂಸದ ಬಿ ವೈ ರಾಘವೇಂದ್ರ (BY Raghavendra) ಅವರು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದ ವಿಡಿಯೋ ನಮಗೆ ಇಂದು ಸಿಕ್ಕಿದೆ.