ಮೈಸೂರು ದಸರಾ-2022: ಈ ಬಾರಿಯ ಉತ್ಸವದಲ್ಲಿ ಜಂಬೂಸವಾರಿ ಜೊತೆ ಕುದುರೆ ಸವಾರಿಯೂ ಹೆಚ್ಚುವರಿ ಆಕರ್ಷಣೆಯಾಗಲಿದೆ
ಜಗದ್ವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ತಾಲೀಮು ಆರಂಭಿಸಿರುವುದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಜಂಬೂಸವಾರಿ ಜೊತೆ ಕುದುರೆ ಸವಾರಿಯೂ ದಸರಾ ಮಹೋತ್ಸವ-2022 ರ ಪ್ರಮುಖ ಆಕರ್ಷಣೆಯಾಗಲಿದೆ.
ಕೋವಿಡ್-19 ಪೀಡೆ ಕ್ರಮೇಣವಾಗಿ ದೂರವಾಗುತ್ತಿದ್ದಂತೆ ನಮ್ಮ ಬದುಕು 2 ವರ್ಷಗಳ ಹಿಂದಿನಂತೆ ಆಗಲಾರಂಭಿಸಿದೆ. ಈ ಬಾರಿಯ ದಸರಾ ಮಹೋತ್ಸವ ಮೊದಲಿನ ಅದ್ದೂರಿತನ (grandeur) ಮತ್ತು ವೈಭವದಿಂದ (splendor) ಜರುಗಲಿದೆ. ಜಗದ್ವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ತಾಲೀಮು ಆರಂಭಿಸಿರುವುದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಜಂಬೂಸವಾರಿ ಜೊತೆ ಕುದುರೆ ಸವಾರಿಯೂ ದಸರಾ ಮಹೋತ್ಸವ-2022 ರ (Mysuru Dasara 2022) ಪ್ರಮುಖ ಆಕರ್ಷಣೆಯಾಗಲಿದೆ. ಕುದುರೆ ಸವಾರಿ ಎರಡು ವರ್ಷಗಳ ಬಳಿಕ ದಸರಾ ಉತ್ಸವಕ್ಕೆ ಮರಳಿದೆ. ವಿಡಿಯೋನಲ್ಲಿ ಮೈಸೂರು ಮೇಯರ್ ಶಿವಕುಮಾರ್ ಕುದುರೆ ಸವಾರಿ ತಾಲೀಮು ನಡೆಸುತ್ತಿರುವುದನ್ನು ನೋಡಬಹುದು.
Published on: Sep 13, 2022 11:34 AM
Latest Videos