ಮುಖ್ಯಮಂತ್ರಿ ಸಿದ್ದರಾಮಯ್ಯರೆಡೆ ಇರುವ ಗೌರವವನ್ನು ಮತ್ತೊಮ್ಮೆ ಪ್ರದರ್ಶಿಸಿದ ಸಂಸದ ಪ್ರತಾಪ್ ಸಿಂಹ
ಅಲ್ಲಿದ್ದವರಿಗೆಲ್ಲ ನಮಸ್ಕರಿಸುತ್ತಾ ಸಿದ್ದರಾಮಯ್ಯ ತಮ್ಮ ಹತ್ತಿರ ಬಂದಾಗ ಪ್ರತಾಪ್ ಸಿಂಹ ಮುಖ್ಯಮಂತ್ರಿಯವರ ಪಾದಮುಟ್ಟಿ ನಮಸ್ಕರಿಸುತ್ತಾರೆ. ಕೂಡಲೇ ಪ್ರತಾಪ್ ಕೈಗಳನ್ನು ಹಿಡಿದು ಮೇಲೆತ್ತುವ ಸಿದ್ದರಾಮಯ್ಯ ಸ್ವಲ್ಪ ಸಮಯದವರೆಗೆ ಆತ್ಮೀಯವಾಗಿ ಸಂಸದನ ಹೆಗಲ ಮೇಲೆ ಕೈ ಇಡುತ್ತಾರೆ. ಪ್ರತಾಪ್ ಮುಖದಲ್ಲಿ ಧನ್ಯತೆಯ ಭಾವ ಗಮನಿಸಬಹುದು.
ಮೈಸೂರು: ಸಂಸದ ಪ್ರತಾಪ್ ಸಿಂಹ (MP Pratap Simha) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಎಷ್ಟೇ ಟೀಕಿಸಿದರೂ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವುದರಲ್ಲಿ ಎರಡು ಮಾತಿಲ್ಲ. ನಗರದ ಅಶೋಕಪುರಂನಲ್ಲಿರುವ ಡಾ ಬಿ ಅರ್ ಅಂಬೇಡ್ಕರ್ ಪ್ರತಿಷ್ಠಾನದಲ್ಲಿ ಇಂದು ಅಯೋಜಿಸಲಾಗಿದ್ದ ವಿ ಶ್ರೀನಿವಾಸ ಪ್ರಸಾದ್ (V Srinivas Prasad) ಅವರ ನುಡಿನಮನ ಕಾರ್ಯಕ್ರಮದಲ್ಲಿ ಅದು ಮತ್ತೊಮ್ಮೆ ಸಾಬೀತಾಯಿತು. ಕಾರ್ಯಕ್ರಮ ಆರಂಭಗೊಳ್ಳುವ ಮೊದಲು ಸಿದ್ದರಾಮಯ್ಯ ವೇದಿಕೆ ಮೇಲೆ ಆಗಮಿಸಿದಾಗ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಎದ್ದು ನಿಲ್ಲುತ್ತಾರೆ. ಅಲ್ಲಿದ್ದವರಿಗೆಲ್ಲ ನಮಸ್ಕರಿಸುತ್ತಾ ಸಿದ್ದರಾಮಯ್ಯ ತಮ್ಮ ಹತ್ತಿರ ಬಂದಾಗ ಪ್ರತಾಪ್ ಸಿಂಹ ಮುಖ್ಯಮಂತ್ರಿಯವರ ಪಾದಮುಟ್ಟಿ ನಮಸ್ಕರಿಸುತ್ತಾರೆ. ಕೂಡಲೇ ಪ್ರತಾಪ್ ಕೈಗಳನ್ನು ಹಿಡಿದು ಮೇಲೆತ್ತುವ ಸಿದ್ದರಾಮಯ್ಯ ಸ್ವಲ್ಪ ಸಮಯದವರೆಗೆ ಆತ್ಮೀಯವಾಗಿ ಸಂಸದನ ಹೆಗಲ ಮೇಲೆ ಕೈ ಇಡುತ್ತಾರೆ. ಪ್ರತಾಪ್ ಮುಖದಲ್ಲಿ ಧನ್ಯತೆಯ ಭಾವ ಗಮನಿಸಬಹುದು. ನಂತರ ತಮ್ಮ ಆಸನದ ಬಳಿಗೆ ವಾಪಸ್ಸು ಬರುವ ಸಿದ್ದರಾಮಯ್ಯನವರು ಯಡಿಯೂರಪ್ಪನವರ ಮುಂದಿದ್ದ ಟೀಪಾಯ್ ಮೇಲೆ ನೀರಿನ ಬಾಟಲ್ ಒಂದು ಅಡ್ಡ ಬಿದ್ದಿರುವುದನ್ನು ಗಮನಿಸಿ ಅದನ್ನು ನೆಟ್ಟಗೆ ನಿಲ್ಲಿಸುತ್ತಾರೆ. ಅವರ ಕ್ರಿಯೆಯನ್ನು ಯಡಿಯೂರಪ್ಪ ತದೇಕಚಿತ್ತದಿಂದ ನೋಡುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ