ಟೈರ್ ಬರ್ಸ್ಟ್ ಆಗಿ ಮಗುಚಿಬಿದ್ದ ಕಾರನಲ್ಲಿದ್ದವರನ್ನು ಹೊರಗೆಳೆದು ಸಹಾಯ ಮಾಡಿದರು ಪ್ರತಾಪ ಸಿಂಹ

TV9 Digital Desk

| Edited By: Arun Kumar Belly

Updated on: Nov 22, 2021 | 10:49 PM

ಅಫಘಾತ ಸಂಭವಿಸಿದಾಗ ಜನರು ನೆರವಿಗೆ ಧಾವಿಸಬೇಕು. ಅಫಘಾತಕ್ಕೀಡಾದವರು ಯಾರಾದರೂ ಅಗಿರಲಿ, ಅವರಿಗೆ ನಾವು ಸಹಾಯ ಮಾಡಬೇಕು ಅಂತ ಸಂಸದರು ಹೇಳಿದರು.

ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರಿದ್ದ ಕಾರು ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಅಫಘಾತಕ್ಕೀಡಾಗಿದೆ ಎಂದ ಗಾಳಿ ಸುದ್ದಿಯನ್ನು ಖುದ್ದು ಸಂಸದರೇ ತಳ್ಳಿ ಹಾಕಿದ್ದು ಅಸಲಿಗೆ ನಡೆದಿದ್ದು ಏನು ಅನ್ನುವುದನ್ನು ರಾಮನಗರದ ಟಿವಿ9 ವರದಿಗಾರರಿಗೆ ವಿವರಿಸಿದ್ದಾರೆ. ರಾಮನಗರದ ಬಳಿ ಕಾರೊಂದು ಅಫಘಾತಕ್ಕೀಡಾಗಿದ್ದು ನಿಜ ಅದರೆ ಅದು ಕೇರಳ ಮೂಲದ ದಂಪತಿಗಳಿಗೆ ಸೇರಿದ್ದು ಅಂತ ಪ್ರತಾಪ ಸಿಂಹ ಹೇಳಿದ್ದಾರೆ. ಅವರು ಹೆದ್ದಾರಿ ಬಳಿಯ ಹೊಟೆಲೊಂದರಲ್ಲಿ ಕೂತಿದ್ದಾಗ ಮೈಸೂರಿನಿಂದ ಬೆಂಗಳೂರು ಕಡೆ ಬರುತ್ತಿದ್ದ ಕಾರೊಂದರ ಮುಂದಿನ ಟೈರ್ ಬರ್ಸ್ಟ್ ಆಗಿ ಕಾರು ನಿಯಂತ್ರಣ ಕಳೆದುಕೊಂಡು ಸುಮರು 100 ಮೀಟರ್ಗಳಷ್ಟು ದೂರ ಹೋಗಿ ಮಗುಚಿ ಬಿದ್ದಿದೆ. ಶಬ್ದ ಕೇಳಿಸಿಕೊಂಡ ಪ್ರತಾಪ ಸಿಂಹ ಮತ್ತು ಅವರ ಜೊತೆಗಿದ್ದವರು ಕೂಡಲೇ ನೆರವಿಗೆ ಧಾವಿಸಿದ್ದಾರೆ. ತಲೆ ಕೆಳಗಾಗಿ ಬಿದ್ದ ಕಾರಲ್ಲಿ ಸಿಕ್ಕಿಕೊಂಡಿದ್ದ ದಂಪತಿ, ಅವರ ಮಗಳು ಮತ್ತು ಚಾಲಕನನ್ನು ಅವರು ಹೊರಗೆಳೆದಿದ್ದಾರೆ.

ಅವರಿಗೆಲ್ಲ ಸಣ್ಣ ಪ್ರಮಾಣದ ಗಾಯಗಳು ಮಾತ್ರ ಆಗಿವೆ ಎಂದ ಸಂಸದರು ದಂಪತಿ ಕೇರಳ ಮೂಲದವರು ಅಂತ ಹೇಳಿದರು.

ಶಾಕ್ ಗೊಳಗಾಗಿದ್ದ ಅವರಿಗೆ ನೀರು ಕುಡಿಸಿ ಒಂದೆಡೆ ಕುಳ್ಳುರಿಸಿದ ಮೇಲೆ, ಪ್ರತಾಪ ಸಿಂಹ ಅವರೇ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಅವರು ಮಹಜರ್ ನಡೆಸಿ ಕಾರನ್ನು ತೆಗೆದುಕೊಂಡು ಹೋಗುವ ಮೊದಲು ಪೊಲೀಸರೊಂದಿಗೆ ಮಾತಾಡಿ ಕಾರಿನಲ್ಲಿದ್ದ ದಂಪತಿಗಳು ಶಾಕ್ ನಿಂದ ಹೊರಬಂದ ನಂತರ, ಒಂದೆರಡು ದಿನಗಳಾದ ಮೇಲೆ ಪ್ರಕರಣನ್ನು ದಾಖಲಿಸಿಕೊಳ್ಳುಂತೆ ಹೇಳಿದರಂತೆ. ಅದಾದ ಮೇಲೆ ಚನ್ನಪಟ್ಟಣದಿಂದ ಒಂದು ಕಾರನ್ನು ತರಿಸಿ ಅವರೆಲ್ಲರನ್ನು ಬೆಂಗಳೂರಿಗೆ ಕಳಿಸಿದರಂತೆ.

ಅಫಘಾತ ಸಂಭವಿಸಿದಾಗ ಜನರು ನೆರವಿಗೆ ಧಾವಿಸಬೇಕು. ಆದರೆ, ಈ ಕಾರಿನ ಹಿಂದೆ ಬರುತ್ತಿದ್ದ ಇತರ ವಾಹನಗಳು ಕಾರು ಮಗುಚಿ ಬಿದ್ದುದನ್ನು ನೋಡಿಯೂ ನೋಡದವರಂತೆ ಹೋದರಂತೆ. ಅಫಘಾತಕ್ಕೀಡಾದವರು ಯಾರಾದರೂ ಅಗಿರಲಿ, ಅವರಿಗೆ ನಾವು ಸಹಾಯ ಮಾಡಬೇಕು ಅಂತ ಸಂಸದರು ಹೇಳಿದರು.

ಇದನ್ನೂ ಓದಿ:   Andhra Pradesh Rain: ಪ್ರವಾಹದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿದ ಭಾರತೀಯ ವಾಯುಸೇನೆ; ವಿಡಿಯೋ ನೋಡಿ

Follow us on

Click on your DTH Provider to Add TV9 Kannada